ಹಿರಿಯೂರು : ಇಂದು ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರು ಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಹಿರಿಯೂರು ನಗರದ ಎ.ಕೃಷ್ಣಪ್ಪ ರೋಟರಿ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರತಿಭಾ ಪುರಸ್ಕಾರ ನೀಡಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಹಿರಿಯೂರು ವಾಲ್ಮೀಕಿ ನಾಯಕ ಸಮಾಜ, ವಾಲ್ಮೀಕಿ ನಾಯಕ ನೌಕರರ ಸಂಘ, ವಾಲ್ಮೀಕಿ ನಾಯಕ ನಿವೃತ್ತ ನೌಕರರ ಸಂಘ, ವಾಲ್ಮೀಕಿ ನಾಯಕ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ, ಯೋಜನೆ ಮತ್ತು ಸಾಂಸ್ಕೃತಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಡಿ ಸುಧಾಕರ್, ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷರಾದ ಶ್ರೀ ಕೆ.ನಾಗರಾಜ್ ಸೊಂಡೆಕೆರೆ, ಪ್ರಾಧ್ಯಾಪಕರಾದ ಶ್ರೀ ಡಾ.ಕರಿಯಪ್ಪ ಮಾಳಿಗೆ, ಶ್ರೀ ಹರ್ತಿಕೋಟೆ ವೀರೇಂದ್ರ ಸಿಂಹ, ಶ್ರೀ ಲಿಂಗರಾಜು, ಶ್ರೀ ಮಂಜುನಾಥ್, ಶ್ರೀ ಮಧುಸೂದನ , ಶ್ರೀ ರಾಜಣ್ಣ, ಶ್ರೀ ಪಾಪಣ್ಣ, ಮತ್ತು ಕಾರ್ಯಕರ್ತರು, ವಾಲ್ಮೀಕಿ ಸಂಘದ ಪದಾಧಿಕಾರಿಗಳು.