ರಾಯಚೂರು : ಜಿಲ್ಲಾ ಬಾಲಕಾರ್ಮಿಕ ಟಾಸ್ಕ್ ಪೋರ್ಸ್ ಅಧಿಕಾರಿಗಳಿಂದ ಜಿಲ್ಲೆಯ ಸಿಂಧನೂರು ನಗರದ ವಿವಿಧ ಹೋಟೆಲ್‌ಗಳು, ಕಿರಾಣಿ ಅಂಗಡಿಗಳು, ಬೇಕರಿಗಳು, ಗ್ಯಾರೇಜ್‌ಗಳು, ಬಾರ್ ಆಯಂಡ್ ರೆಸ್ಟೋರೆಂಟ್ ಸೇರಿದಂತೆ ಇತರೆ ಕಡೆ ಆಗಸ್ಟ್ 08 ರ ಗುರುವಾರದಂದು ತಪಾಸಣೆ ಮಾಡಿ, ಒಬ್ಬ ಕಿಶೋರ ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಈ ಕುರಿತು ಸಿಂಧನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಧನೂರು ನಗರದ ಹಟ್ಟಿ ರಸ್ತೆಯ, ಲೇಜೌಟ್ ವಿರಾಪಾಪುರದ ಮೆ|| ಮಂಜುನಾಥ ಬೇಕರಿ ಬಿಡುಗಡೆಯಾದ ಅಮೀರ ಅಲಿ ತಂದೆ ಅಮೀನುದ್ದೀನ್ ಅವರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ವೇಳೆ ಜಿಲ್ಲಾ ಬಾಲಕಾರ್ಮಿಕ ಯೋಜನೆ ಯೋಜನೆಯ ನಿರ್ದೇಶಕ ಮಂಜುನಾಥ ರೆಡ್ಡಿ ಅವರು ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016ರಂತೆ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೂ 15 ರಿಂದ 18 ವರ್ಷದೊಳಗಿನ ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ 50,000/-ರೂ.ಗಳ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ಇರುತ್ತದೆ.
ವಾಹನಗಳಲ್ಲಿ ಮಕ್ಕಳ ಕೃಷಿ ಚಟುವಟಿಕೆಗಳು ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದುಡಿಯುವ ಮಕ್ಕಳು ಕಂಡುಬಂತು ಮಕ್ಕಳ ಸಹಾಯವಾಣಿ-1098ಗೆ ಮಾಹಿತಿ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಸಿಂಧನೂರು ಕಾರ್ಮಿಕ ನಿರೀಕ್ಷಕರಾದ ವಿಜಯಲಕ್ಷ್ಮಿ, ಹೆಚ್ಚುವರಿ ನಿರೀಕ್ಷಕರಾದ ಲಿಂಗರಾಜ್, ಎಸಿಡಿಪಿಯೊ ಚಂದ್ರಶೇಖರ, ಶಿಕ್ಷಣ ಇಲಾಖೆ ಬಿ.ಆರ್.ಪಿ ಪಂಪಾಪತಿ ಸೇರಿದಂತೆ ಇತರರು ಇದ್ದರು.