ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟ ಸೋನಾಲ್ ಮದುವೆ ಇಂದು ಬೆಂಗಳೂರಿನ ಕೆಂಗೇರಿ ಬಳಿ ಪೂರ್ಣಿಮಾ ಪ್ಯಾಲೆಸ್ ನಲ್ಲಿ ನಡೆಯುತ್ತಿದೆ ನೆನ್ನೆ ಸಂಜೆ ಈ ಜೋಡಿ ಅದ್ದೂರಿ ಆರತಕ್ಷತೆ ಸಮಾರಂಭ ಇಂದು ಬೆಳಗಿನ ಜಾವ ವಿವಾಹ ಶಾಸ್ತ್ರಗಳು ಜರುಗಿದವು. ಆಗಸ್ಟ್ 11 ರಂದು ಬೆಳಿಗ್ಗೆ 10.30 ರಿಂದ 11:30 ರವರೆಗೆ ನಡೆಯುವ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನಡೆಯುತ್ತಿದೆ ತರುಣ್ ಸುಧೀರ್ ಮತ್ತು ಸೋನಾಲ್ ಅವರ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಮದುವೆ ಮಂಟಪವನ್ನು ವಿಶೇಷವಾಗಿ ಅಲಂಕರಿಸಿ ಸೋನಾಲ್ ಮೆಂಥರೋ ಮತ್ತು ತರುಣ್ ಸುಧೀರ್ ಅವರ ಮದುವೆ ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ನೆರವೇರಿತು. ವಿವಾಹ ಸಮಾರಂಭದಲ್ಲಿ ಅನೇಕ ಸೆಲೆಬ್ರೆಟಿಗಳು ಭಾಗವಹಿಸಿದ್ದರು ನವಜೋಡಿಗೆ ಎಲ್ಲರೂ ಆಶೀರ್ವಾದ ಮಾಡಿದ್ದಾರೆ ಕನ್ನಡ ಚಿತ್ರರಂಗದ ಗಣ್ಯರು ಸೋನಾಲ್ ಮತ್ತು ತರುಣ್ಗೆ ಶುಭ ಹಾರೈಸಿದರು.
ಸೋನಾಲ್ ಅವರು ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿದ್ದರು. ಹಿರಿಯ ನಟಿಯಾದ ಶ್ರುತಿ ಸುಧಾರಾಣಿ ಮಾಳ್ವಿಕಾ ಅವಿನಾಶ್, ನಟ ನೆನಪಿರಲಿ ಪ್ರೇಮ್ ಸೇರಿದಂತೆ ಅನೇಕ ಕಲಾವಿದರು ಈ ಮದುವೆಗೆ ಸಾಕ್ಷಿಯಾಗಿದ್ದರು ಚಿತ್ರರಂಗದ ಎಲ್ಲರ ಜೊತೆ ತರುಣ್ ಸುಧೀರ್ ಅವರ ಆತ್ಮೀಯತೆಯನ್ನು ಹೊಂದಿದ್ದರು.
ತರುಣ್ ಸುಧೀರ್ ಮತ್ತು ಸೋನಾಲ್ ಮೆಂತರೋ ಅವರ ಬಾಳಿನಲ್ಲಿ ಈಗ ಹೊಸ ಅಧ್ಯಯನ ಆರಂಭವಾಗಿದೆ ಎಂದು ಸಂಗೀತ ನಿರ್ದೇಶಕ ಹರಿಕೃಷ್ಣ ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಮುಂತಾದವರು ಕೂಡ ನಿರ್ಮಾಣ ಮಾಡಿದ್ದಾರೆ. ಇದೇ ರೀತಿ ಬಹುಭಾಷಾ ನಟ ಜಗಪತಿ ಬಾಬು ಅವರು ಬೆಂಗಳೂರಿಗೆ ಬಂದು ಈ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ ಅವರು ಸಹ ತರುಣ್ ಸುಧೀರ್ ಅವರ ನಿರ್ದೇಶನದ ಕಾಟೇರ ಸಿನಿಮಾಗಳಲ್ಲಿ ಜಗಪತಿಯವರು ನಟಿಸಿದ್ದರು ಅವರ ನಡುವೆ ಬಾಂದವ್ಯ ಬೆಳೆದಿತ್ತು. ಮತ್ತು ನಿರೂಪಕಿ ಅನುಶ್ರೀ ನಟಿ ನಿಶ್ಚಿಕ ನಾಯರ್ ರಚಿತಾ ರಾಮ್ ಸೇರಿದಂತೆ ಅನೇಕ ಸೆಲೆಬ್ರೆರಿಟಿಗಳು ಭಾಗವಹಿಸಿದ್ದರು.