ರಾಯಚೂರು,ಆ.12 : ಜಿಲ್ಲೆಯ ಸಿಂಧನೂರು ತಾಲೂಕಿನ ಪಗಡದಿನ್ನಿ ಮತ್ತು ಹೊಸ್ಸಳ್ಳಿ ಇ.ಜೆ ಆಯ್ದಗ್ರಾಮ ಪಂಚಾಯತಿಗಳಲ್ಲಿ ಅನುಷ್ಠ್ಠಾನಗೊಂಡ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ನರೇಗಾ ಮಾರ್ಗಸೂಚಿಗಳನ್ವಯ ಹಾಗೂ ಪಾರದರ್ಶಕವಾಗಿ ಅನುಷ್ಟಾನÀಗೊಳಿಸಲಾಗಿದೆಯೇ ಎಂಬುದರ ಬಗ್ಗೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧಿಕಾರಿಗಳಾದ ಸಂತೋಶ ಕುಮಾರ್ ತಿವಾರಿ, ತಂಡದ ನಿರ್ದೇಶಕರು, ಹಾಗೂ ರಾಬರ್ಟ್ ರಿಚರ್ಡ್ ಎಕ್ಸ್, ಯೋಜನಾಧಿಕಾರಿ (ನರೇಗಾ) ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪಗಡದಿನ್ನಿ ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಗೋದಾಮು ನಿರ್ಮಾಣ, ಸಿಸಿ ರಸ್ತೆ, ನಾಲಾ ಅಭಿವೃದ್ದಿ, ದನದ ಕೊಟ್ಟಿಗೆ, ಮೆಟಲ್ ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿ, ಕೂಲಿಕಾರರೊಂದಿಗೆ ಕೂಲಿ ಮೊತ್ತ ಕೆಲಸದ ವಿವರಗಳ ಬಗ್ಗೆ ಮಾಹಿತಿಯನ್ನು ಪಡೆದರು. ನಂತರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಆಯ್ಕೆ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳೊಂದಿಗೆ ನರೇಗಾ ಯೋಜನೆಯಿಂದ ಸಿಗುವ ಸೌಲಭ್ಯಗಳ ಕುರಿತು ಸುದಿರ್ಘವಾಗಿ ಚರ್ಚೆ ನಡೆಸಿದರು.
ತದನಂತರ ಹೊಸ್ಸಳ್ಳಿ ಇ.ಜೆ ಗ್ರಾ.ಪಂಗೆ ಭೇಟಿ ಎಳುವಹಿಯ ಕಾಮಗಾರಿಯ ಕಡತಗಳನ್ನು ಪರಿಶೀಸಿ, ಕಾಮಗಾರಿಗಳನ್ನು ಉತ್ತಮ ಗುಣಮಟ್ಟದ ಬಗ್ಗೆ ನಿರ್ವಹಣೆ ಮಾಡಲು ಕೆಲವು ಮಾಹಿತಿಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಶಶಿಕಾಂತ ಶಿವಪೂರೆ, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸುರೇಶ ಬಾಬು, ಗ್ರಾ.ಉ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಸಹಾಯಕ ನಿರ್ದೇಶಕರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಲಂಬಾಷ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಸಮನ್ವಯ ಅಧಿಕಾರಿ, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.