ರಾಯಚೂರು,ಆ.14,:- 78ನೇ ಭಾರತ ಸ್ವಾತಂತೋತ್ಸವದ ಅಂಗವಾಗಿ ಭಾರತದ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರು ಪ್ರತಿ ವರ್ಷ ಆಗಸ್ಟ್ 14 ಅನ್ನು ವಿಭಜನೆಯ ಭೀಕರ ಸ್ಮರಣಾರ್ಥ ದಿನವನ್ನಾಗಿ ಆಚರಿಸಲು ಕರೆ ನೀಡಿದ ಹಿನ್ನಲೆಯಲ್ಲಿ ನಗರದ ಎಸ್‌ಬಿಐ ಕೇಂದ್ರ ಕಚೇರಿಯಲ್ಲಿ ಆ.13ರ ಮಂಗಳವಾರ ದಂದು ಜಿಲ್ಲಾ ಅಗ್ರಗಣ್ಯ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್‌ಗಳ ಸಂಯುಕ್ತಾಶ್ರಯದಲ್ಲಿ ಭಾರತ ವಿಭಜನೆಯ ಸಂದರ್ಭದಲ್ಲಿ ಭಯಾನಕರ ಘಟನೆಗಳ ಛಾಯಾಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.
ಈ ವೇಳೆ ಜಿಲ್ಲಾ ಅಗ್ರಗಣ್ಯ ಬ್ಯಾಂಕ್ ಮುಖ್ಯಸ್ಥರಾದ ಟಿ.ತಿರುಮಲೇಶ್ ಅವರು ಮಾತನಾಡಿ, ಭಾರತದ ಪ್ರಗತಿಗಾಗಿ ನಾವು ಶ್ರಮಿಸಿ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಕಲ್ಪಿಸಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವು ಮಾಡುವ ಕೆಲಸಗಳು ನಾಳಿನ ಪ್ರಜೆಗಳಿಗೆ ಉತ್ತಮ ಉದಾಹರಣೆಯಾಗಬೇಕೆಂದರು.
ಈ ವೇಳೆ ಹಿರಿಯ ಸ್ವಾತಂತ್ರö್ಯ ಹೋರಾಟಗಾರರಾದ ಡಿ.ಹಂಪಣ್ಣ ಅವರಿಗೆ ಬ್ಯಾಂಕ್‌ಗಳ ಸಿಬ್ಬಂದಿಗಳಿAದ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಮಾಧವಿ, ಎಸ್.ಬಿ.ಐ ಮುಖ್ಯ ವ್ಯವಸ್ಥಾಪಕರಾದ ರೆಡ್ಡಿ ಕುಮಾರ್, ಆನಂದ್ ವಾಲಿ, ವ್ಯವಸ್ಥಾಪಕರಾದ ಹೆಚ್.ಆರ್ ಶ್ರೀರಾಮ್ ಸಿಂಬ್ಬದಿಗಳಾದ ಆರ್‌ಬಿಒ ಸಿಬ್ಬಂದಿಗಳು, ಎಸ್‌ಬಿಐ ಸಿಬ್ಬಂದಿಗಳು, ಆರ್‌ಎಸಿಸಿ ಸಿಬ್ಬಂದಿಗಳು, ಜಿಲ್ಲಾ ಅಗ್ರಗಣ್ಯ ಬ್ಯಾಂಕ್ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಇದ್ದರು.