Breaking
Wed. Dec 25th, 2024

ಕೃಷಿ ಯಂತ್ರೋಪಕರಣ ಮತ್ತು ಜೆಟ್ ಪೈಪ್ ಪಡೆಯಲು ಇ-ಆಡಳಿತ ಮುಖಾಂತರ 8 ಸಾವಿರ ರೈತರಿಗೆ ದೂರವಾಣಿ ನೇರ ಕರೆ

ಶಿವಮೊಗ್ಗ, ಆಗಸ್ಟ್ 14  : ಕೃಷಿ ಇಲಾಖೆ ಶಿವಮೊಗ್ಗ ಹಾಗೂ ಇ-ಆಡಳಿತ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಆ.12 ರ ಸೋಮವಾರ ದಂದು ತಾಲ್ಲೂಕಿನ ಸುಮಾರು 8 ಸಾವಿರ ರೈತರಿಗೆ ದೂರವಾಣಿ ಕರೆ ಮುಖಾಂತರ ಕೃಷಿ ಯಾಂತ್ರಿಕರಣ ಹಾಗೂ ಸೂಕ್ಷ್ಮ ನೀರಾವರಿ ಯೋಜನೆಯಡಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಕಾರ್ಯಗಾರವನ್ನು ಆಯೋಜಿಸಲಾಯಿತು.

ಮದ್ಯಾಹ್ನ 3.00 ಗಂಟೆಗೆ ಪ್ರಾರಂಭವಾದ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ತಾಲ್ಲೂಕು ಕೃಷಿ ಇಲಾಖೆ, ಸಹಾಯಕ ಕೃಷಿ ನಿರ್ದೇಶಕ ರಮೇಶ್.ಎಸ್.ಟಿ. ರವರು ಕೃಷಿ ಯಾಂತ್ರಿಕರಣ ಯೋಜನೆಯಡಿ ಪವರ್ ಟಿಲ್ಲರ್, ಟ್ರಾಕ್ಟರ್ ಚಾಲಿತ ಉಪಕರಣಗಳಾದ ಬಲರಾಮ ನೇಗಿಲು, ಬಿತ್ತನೆ ಕೂರಿಗೆ, ಕಲ್ಟಿವೇಟರ್‌ಗಳು, ಡಿಸ್ಕ್ ಹ್ಯಾರೋ, ರೋಟವೇಟರ್, ಸ್ಲಾಷರ್, ಲೇವಲರ್, ಬೇಲರ್, ಒಕ್ಕಣೆ ಯಂತ್ರ, ಭತ್ತದ ನಾಟಿ ಯಂತ್ರ, ಕಳೆಕೊಚ್ಚುವ ಯಂತ್ರ, ಪವರ್ ಸ್ಪೆçÃಯರ್, ರೋಟರಿ ವೀಡರ್ ಇನ್ನಿತರ ಉಪಕರಣಗಳಿಗೆ ಸಾಮಾನ್ಯ ವರ್ಗ ರೈತರಿಗೆ 50% ಸಹಾಯಧನದಲ್ಲಿ ವಿತರಿಸಲಾಗುತ್ತಿದೆಯೆಂದು ತಿಳಿಸಿದರು.

ಸೂಕ್ಷ್ಮ ನೀರಾವರಿ ಯೋಜನೆಯಡಿ ನೀರಾವರಿ ಉಪಕರಣಗಳಾದ ಜೆಟ್ ಪೈಪ್‌ಗಳು/ ಕಪ್ಪು ಪೈಪ್‌ಗಳನ್ನು ಎಲ್ಲಾ ವರ್ಗದ ರೈತರಿಗೆ 90% ಸಹಾಯಧನದಲ್ಲಿ ವಿತರಿಸಲಾಗುತ್ತಿದೆಯೆಂದು ತಿಳಿಸಿದರು.ರೈತರು ಕೇವಲ ಶೇಕಡಾ 10 ರಷ್ಟು ರೈತರ ವಂತಿಕೆಯನ್ನು ಪಾವತಿ ಮಾಡಿ ಸೌಲಭ್ಯ ಪಡೆಯಬಹುದು. 

 ಅದೇ ರೀತಿ ಕೃಷಿ ಸಂಸ್ಕರಣೆ ಯೋಜನೆಯಡಿ ಸ್ವತಃ ಮನೆ ಬಳಕೆಗೆ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಉದ್ಯೋಗ ಮಾಡಲು ಅನುಕೂಲವಾಗವಂತೆ ಹಿಟ್ಟಿನ ಗಿರಣಿ, ರಾಗಿ ಕ್ಲಿನಿಂಗ್ ಮಿಷನ್, ಮಿನಿ ರೈಸ್ ಮಿಲ್, ಖಾರ ಪುಡಿಮಾಡುವ ಯಂತ್ರ ಇವುಗಳನ್ನು ಸಾಮಾನ್ಯ ವರ್ಗ ರೈತರಿಗೆ 50% ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ 90% ಸಹಾಯಧನದಲ್ಲಿ ವಿತರಿಸಲಾಗುತ್ತಿದೆಯೆಂದು ತಿಳಿಸಿದರು.

ಮೇಲ್ಕಂಡ ಯೋಜನೆಗಳಲ್ಲಿ ಪ್ರಸ್ತುತ ಅನುದಾನ ಲಭ್ಯವಿದ್ದು ಎಲ್ಲಾ ರೈತಭಾಂದವರು ತಮ್ಮ ಹತ್ತಿರದ ಕೃಷಿ ಇಲಾಖೆಗೆ ಬೇಟಿ ಮಾಡಿ ಆದಾರ್, ಪಹಣಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಲು ಮನವಿ ಮಾಡಿದರು.

ಸಹಾಯಕ ಕೃಷಿ ನಿರ್ದೇಶಕ ರಮೇಶ್.ಎಸ್.ಟಿ. ರವರು ರೈತರೊಂದಿಗೆ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದು.

Related Post

Leave a Reply

Your email address will not be published. Required fields are marked *