ಚಿತ್ರದುರ್ಗ ಆಗಸ್ಟ್ 15 : 78ನೇ ಭಾರತ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಭವನದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ರಾಷ್ಟ್ರ ಧ್ವಜರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿಗಳಾದ ಪಿ.ಎಂ.ವೇಣುಗೋಪಾಲ, ಜಿ.ವೆಂಕಟೇಶ್, ಎಸ್.ಚಂದ್ರಶೇಖರ್, ಎಂ.ಜೆ.ಬೋರೇಶ, ಆರ್.ತಿಮ್ಮಶೆಟ್ಟಿ, ಅಂಜಿನ ಮೂರ್ತಿ, ಅಪ್ರೆಂಟಿಸ್ ತರಬೇತಾರ್ಥಿ ಸಿ.ಕಾಟೇಶ್ ಇದ್ದರು.