ಚಿತ್ರದುರ್ಗ 16: ತಾಲ್ಲೂಕು ಹಿರೇಬೆನ್ನೂರು ಗೊಲ್ಲರಹಟ್ಟಿ ಗ್ರಾಮದ ವಾಸಿಯಾದ ಶೋಭಾ ಗಂಡ ಹೇಮಂತ (20 ವರ್ಷ) ಎಂಬ ಮಹಿಳೆಯ ಕಾಣೆಯಾದ ಕುರಿತು 2024ರ ಆಗಸ್ಟ್ 10 ರಂದು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ ಇದೆ. ಶೋಭಾ ಗಂಡ ಹೇಮಂತ, ಸುಮಾರು 20 ವರ್ಷ, ಕೂಲಿ ಕೆಲಸ ಮಾಡುತ್ತಿದ್ದು, ಸುಮಾರು 5 ಅಡಿ ಎತ್ತರವಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ದುಂಡು ಮುಖ, ಸಾಧಾರಣ ಮೈಕಟ್ಟು, ಕೆಂಪನೆಯ ಮೈಬಣ್ಣ ಹೊಂದಿರುತ್ತಾರೆ.
ಎಡ ಕೈ ಮೇಲೆ ಇಂಗ್ಲಿಷ್ ಭಾಷೆಯಲ್ಲಿ DAD & MOM ಎಂದು ಹಚ್ಚೆ ಇರುತ್ತದೆ. ಇವರ ಗುರುತ ಪತ್ತೆಯಾದರೆ ಚಿತ್ರದುರ್ಗ ತಾಲ್ಲೂಕು ಭರಮಸಾಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ.