Breaking
Tue. Dec 24th, 2024

ಚಿಕ್ಕಮಗಳೂರು: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ…!

ಚಿಕ್ಕಮಗಳೂರು: ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಚಂಡುವಳ್ಳಿ ಮೂಡಿಗೆರೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸುಭಿಕ್ಷಾ (25) ಎಂದು ಗುರುತಿಸಲಾಗಿದೆ.

ಸುಭಿಕ್ಷಾ ಚಂಡುವಳ್ಳಿಯ ಪ್ರವೀಣ್ ಎಂಬುವವರನ್ನು 4 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಎರಡೂವರೆ ವರ್ಷದ ಮಗನೂ ಇದ್ದಾನೆ. ಮಹಿಳೆ ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಮೃತಳ ಕುಟುಂಬಸ್ಥರು. ಸೋಮವಾರ ಸಂಜೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಹಶೀಲ್ದಾರ್ ಇಲ್ಲದ ಕಾರಣ ಪೊಲೀಸರು ಶವ ತೆಗೆದುಕೊಳ್ಳದೇ ಕಾದು ಕುಳಿತಿದ್ದರು.

ಮದುವೆಯಾದ 7 ವರ್ಷದೊಳಗೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡರೆ ತಹಶೀಲ್ದಾರ್ ಮಹಜರು ಆದೇಶಿಸಿದ ಬಳಿಕ ಶವ ಸಂಗ್ರಹಿಸಬೇಕು ಎಂಬ ನಿಯಮವಿದೆ. ಈ ಕಾರಣಕ್ಕೆ ತಹಶೀಲ್ದಾರ್ ಬಂದ ನಂತರ ಪೊಲೀಸರು ಶವವನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಿದ್ದಾರೆ. ಈ ಕುರಿತು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Post

Leave a Reply

Your email address will not be published. Required fields are marked *