ತಮಿಳುನಾಡು : ಇಂದು ಆಗಸ್ಟ್ 22 ರಂದು ತಮಿಳು ನಟ ವಿಜಯ್ ಅವರು ತಮ್ಮ ರಾಜಕೀಯ ಪಕ್ಷದ ಧ್ವಜ ಮತ್ತು ಚಿಹ್ನೆಯನ್ನು ಬಿಡುಗಡೆ ಮಾಡಿದರು. ಮುಂಬರುವ ಚುನಾವಣೆಗೆ ವಿಜಯ್ ಈಗಾಗಲೇ ತಯಾರಿ ನಡೆಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ರಾಜಕೀಯ ಪ್ರವೇಶವನ್ನು ಘೋಷಿಸಿದ ವಿಜಯ್, ಪಕ್ಷದ ಹೆಸರನ್ನು ‘ತಮಿಳಿಗ ವೆಟ್ರಿ ಕಳಗಂ’ ಎಂದು ಘೋಷಿಸಿದರು. ಇದರ ಬೆನ್ನಲ್ಲೇ ಇಂದು ತಮ್ಮ ಪಕ್ಷದ ಧ್ವಜ ಹಾಗೂ ಪಕ್ಷದ ಚಿಹ್ನೆಯನ್ನು ಬಿಡುಗಡೆ ಮಾಡಿದರು.
2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸುವುದಾಗಿ ವಿಜಯ್ ಈ ಹಿಂದೆ ಘೋಷಿಸಿದ್ದರು.ಈ ವರ್ಷ ಲೋಕಸಭೆ ಚುನಾವಣೆಯಲ್ಲಿ ವಿಜಯ್ ಯಾವುದೇ ಮೈತ್ರಿ ಅಥವಾ ಪಕ್ಷದಲ್ಲಿ ಭಾಗವಹಿಸಿರಲಿಲ್ಲ.