Breaking
Wed. Dec 25th, 2024

ರೈತರಿಗೆ ಹಸು/ಎಮ್ಮೆ ವಿತರಿಸಿ ಸಮಗ್ರ ಕೃಷಿ ಪದ್ಧತಿ ತರಬೇತಿಗೆ ಟಿ ರಘುಮೂರ್ತಿ ಚಾಲನೆ..‌.!

ಚಳ್ಳಕೆರೆ ತಾಲೂಕಿನ ನಾಗಗೊಂಡನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಹಸು/ಎಮ್ಮೆ ವಿತರಿಸಿ ಸಮಗ್ರ ಕೃಷಿ ಪದ್ಧತಿ ತರಬೇತಿಗೆ ಟಿ ರಘುಮೂರ್ತಿ ಚಾಲನೆ ನೀಡಿ ಮಾತನಾಡಿದರು. 

ರಾಷ್ಟ್ರೀಯ ಸುಸ್ತಿರಾ ಕೃಷಿ ಅಭಿಯಾನದ ಅಡಿಯಲ್ಲಿ ಕೃಷಿ ಸಚಿವಾಲಯವು ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರತಿಯೊಬ್ಬರು ಇದರ ಸದುಪಯೋಗಪಡಿಸಿಕೊಂಡು ದೇಶದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುವ ರೈತರಿಗೆ ನೆರವಾಗಲಿದೆ ಎಂದು ತಿಳಿಸಿದರು. ನಮ್ಮ ದೇಶದಲ್ಲಿ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿ ಬದುಕನ್ನು ಸಾಗಿಸುತ್ತಿದ್ದಾರೆ ಅವರಿಗೆ ನೆರವಾಗಲೆಂದು ನಮ್ಮ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.

ರೈತರ ಜೊತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ ರೈತರಿಗೆ ಯಾವುದೇ ರೀತಿಯ ತರಬೇತಿ ಅಥವಾ ಸೌಲಭ್ಯ ಕೊರತೆ ಇದ್ದಲ್ಲಿ ನಾವು ಬಗೆಹರಿಸುತ್ತೇವೆ ಅವರಿಗೆ ಸೂಕ್ತವಾದ ತರಬೇತಿ ಕೊಡುವುದರ ಮೂಲಕ ಸರಿಯಾದ ಜ್ಞಾನವನ್ನು ಕೊಡುತ್ತೇವೆ ಮತ್ತು ಇದರ ಜೊತೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿ ರೇವಣ್ಣ ಅವರು ಮಾತನಾಡಿ ಇತ್ತೀಚಿಗೆ ಪಶುಗಳ ಸಂತತಿ ಕಡಿಮೆಯಾಗಿದ್ದು ಇವುಗಳ ಪಾಲನೆ ಪೋಷಣೆ ಮಾಡುವುದು ನಮ್ಮ ರೈತರ ಕರ್ತವ್ಯವಾಗಿದೆ ಹಾಗೂ ಇವರ ಮೂಲಕ ಪಶು ಸಂಗೋಪನೆಯನ್ನು ಸನಾತನ ಕಾಲದಿಂದಲೂ ರೂಡಿ ಮಾಡಿಕೊಂಡು ಬಂದಿದ್ದಾರೆ ಇವರಿಗೆ ಹಸುಗಳ ಆರೋಗ್ಯದ ಮೇಲೆ ಗಮನಹಡಲು ನಮ್ಮ ಅಧಿಕಾರಿಗಳು ಈಗಾಗಲೇ 21ನೇ ಜಾನುವಾರು ಗಣತಿ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸಲಾಗುವುದು ಇದಕ್ಕೆ ಎಲ್ಲಾ ಜನರು ಸಹಕರಿಸಬೇಕೆಂದು ಮತ್ತು ಸಾಕುಪ್ರಾಣಿಗಳ ಪರದೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಅಶೋಕ್ ಮಂಜುನಾಥ್, ಪಶುವೈದ್ಯ ರೇವಣ್ಣ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರವಿಕುಮಾರ್, ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ. ಉಪಾಧ್ಯಕ್ಷೆ ಲೋಕಮ್ಮ ಸುರೇಶ್, ಸದಸ್ಯರಾದ ನರಸಿಂಹಪ್ಪ, ರಂಜನ್, ರಂಗನಾಥ್, ಹೇಮಂತ್ ರಾಜು, ಪುರಸಭೆ ಸದಸ್ಯರಾದ ರಾಘವೇಂದ್ರ, ರಮೇಶ್ ಗೌಡ, ಮುಖಂಡರಾದ ಮಂಜುನಾಥ್, ನಾಗರಾಜ್, ಸುರೇಶ್, ನಾಗರಾಜ್, ವೆಂಕಟೇಶ್, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

Related Post

Leave a Reply

Your email address will not be published. Required fields are marked *