ಚಿತ್ರದುರ್ಗ. ಆಗಸ್ಟ್ 30 : ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕ್ರೀಡಾ, ಸಾಂಸ್ಕೃತಿಕ, ರೋಯಿಂಗ್ ಹಾಗೂ ಎನ್ ಎಸ್ ಎಸ್ ಘಟಕಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಆರಂಭವಾಯಿತು.
ಕೆಡಿಪಿ ಸದಸ್ಯ ಕೆ.ಎಸ್. ನಾಗರಾಜ್ ಮಾತನಾಡಿ, ಸರಕಾರಿ ಶಾಲೆಯಲ್ಲಿ ಓದಿದ ಅನೇಕರು ಇಂದು ಉನ್ನತ ಸ್ಥಾನಮಾನ ಪಡೆದಿದ್ದಾರೆ. ಇದಕ್ಕೆ ಕಾರಣ ಛಲ-ಗುರಿ. ಅವರ ಮಾರ್ಗದಲ್ಲಿ ನಡೆಯುವುದನ್ನು ಕಲಿಯಲು ನೀವೂ ಕಠಿಣ ಅಭ್ಯಾಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಗಣ್ಯರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ನಿರ್ದೇಶಕ ಎಚ್.ಬಿ. ನರಸಿಂಹಮೂರ್ತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆರ್.ಮಂಜುನಾಥ್, ನಿವೃತ್ತ ಉಪನ್ಯಾಸಕ ಎನ್.ನರಸಿಂಹಮೂರ್ತಿ, ಹಿರಿಯ ಉಪನ್ಯಾಸಕ ಪ್ರೊ. ಬಿ.ಕೃಷ್ಣಪ್ಪ, ನಿವೃತ್ತ ಉಪನ್ಯಾಸಕಿ ಶೈಲಾ ಜಯಕುಮಾರ್, ಬಿ.ಆರ್. ಶಿವಕುಮಾರ್, ಮಹೇಶ್ ಬಾಬು, ದೇವೇಂದ್ರಪ್ಪ, ಡಾ. ಹೇಮಂತರಾಜ್, ನಗರಸಭೆ ಮಾಜಿ ಸದಸ್ಯರಾದ ಎಸ್.ಶ್ರೀರಾಮ್, ಶ್ರೀನಿವಾಸ್, ಚನ್ನಬಸಪ್ಪ ವಿಶ್ವವಿದ್ಯಾಲಯದ ಅಧ್ಯಾಪಕರಾದ ದೊಡಯ್ಯ, ಡಾ. ಗುರುನಾಥ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.