ಚಳ್ಳಕೆರೆ ನಗರದ ಸರಕಾರಿ ಭವನದಲ್ಲಿ ಕನ್ನಡ ರಕ್ಷಣಾ ಮತ್ತು ಸಂಸ್ಕೃತಿ ವೇದಿಕೆ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರು ಬರೆದ ಒಳನೋಟದ ಲೇಖನಗಳ ಸಂಕಲನವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಎಂ. ಜೈತುಂಬಿ, ಉಪಾಧ್ಯಕ್ಷೆ ಎಂ. ಸುಜಾತಾ ಪ್ರಹ್ಲಾದ್, ಸದಸ್ಯೆ ಎಂ. ಮಂಜುಳಾ ಪ್ರಸನ್ನಕುಮಾರ್, ಕಸಾಪ ತಾಲೂಕು ಅಧ್ಯಕ್ಷೆ, ಶ್ರೀ. ವೀರಭದ್ರಸ್ವಾಮಿ, ಕವಿ, ಪತ್ರಕರ್ತ ಶ್ರೀ. ಜಡೆಕುಂಟೆ, ಶ್ರೀ. ಮಂಜುನಾಥ್, ಮುಖ್ಯ ನಿರೂಪಕರು, ಶ್ರೀ. ಬಿ.ತಿಪ್ಪಣ್ಣ, ಶ್ರೀ. ಮರಿಕುಂಟೆ, ಲೇಖಕರು ಶ್ರೀ. ಡಾ. ಕೆ.ಶಿವಲಿಂಗಪ್ಪ, ಜಿಲ್ಲಾ ಉಪನ್ಯಾಸಕರಾದ ಶ್ರೀ. ಎಸ್.ಲಕ್ಷ್ಮಣ, ರಂಗಭೂಮಿ ಕಲಾವಿದರಾದ ಶ್ರೀ. ಪಿ.ತಿಪ್ಪಸ್ವಾಮಿ, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.