ವಿಜಯಪುರ : ವಿಜಯಪುರ ಜಿಲ್ಲೆ ಇಂಗಳಗಿ ದೇವರಚಿಪ್ಪರಗಿ ತಾಲೂಕಿನ ಬಿಬಿ ಗ್ರಾಮದಲ್ಲಿ ನಡೆದ ರಥೋತ್ಸವ ಜಾತ್ರೆ ವೇಳೆ ರಥಕ್ಕೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ದೇವೇಂದ್ರ ಬಡಿಗೇರ್ (24) ಮೃತ ದುರ್ದೈವಿ.
ಗಣ ಗುರುಸಿದ್ದೇಶ್ವರ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು, ದುರಂತದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಥ ಎಳೆಯುವ ವೇಳೆ ಯುವಕ ಸ್ಟೇರಿಂಗ್‌ಗೆ ಸಿಲುಕಿಕೊಂಡಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದೇವೇಂದ್ರ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.