ಹಾಸನ ಸೆ.10 :- ಕೇಂದ್ರೀಯ ವಿದ್ಯಾಲಯ ಸಂಘಟನೆ ಹರಿಯಾಣ ರಾಜ್ಯದ ಅಂಬಾಲದಲ್ಲಿ ಆಯೋಜಿಸಿದ್ದ 53ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಹಾಸನದ ಕೇಂದ್ರೀಯ ವಿದ್ಯಾಲಯದ 14 ವರ್ಷದೊಳಗಿನ ವಾಲಿಬಾಲ್ ತಂಡ ಸತತವಾಗಿ ಎರಡನೇ ಬಾರಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ನಾಗಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ ತರಬೇತುದಾರ ವಾಸುದೇವ್ ನೇತೃತ್ವದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಕ್ರೀಡಾ ಪಟುಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ