ಚಂಡೀಗಢ: ಬಿಜೆಪಿ ಮುಖಂಡನ ನಿರ್ಲಕ್ಷ್ಯದ ಚಾಲನೆಯಿಂದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಗಾಲ್ಫ್ ಕೋರ್ಸ್ ರಸ್ತೆಯ ಬೆಲ್ವೆಡೆರೆ ಪಾರ್ಕ್ ಬಳಿಯ ಎಕ್ಸ್‌ಪ್ರೆಸ್ ಲೇನ್‌ನಲ್ಲಿ ಈ ಘಟನೆ ಸಂಭವಿಸಿದೆ. ಬಿಜೆಪಿ ನಾಯಕ ಕುಲದೀಪ್ ಠಾಕೂರ್ ಒಂದು ದಿಕ್ಕಿನಲ್ಲಿ ಸಾಗಿದ್ದಾರೆ. ಇವರು ಮಹೇಂದ್ರ 3XO ಕಾರನ್ನು ಚಲಾಯಿಸುತ್ತಿದ್ದರು.
ಈ ವೇಳೆ ಕಾರು ಎದುರಿನಿಂದ ಬರುತ್ತಿದ್ದ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸೈಕ್ಲಿಸ್ಟ್ ಅಕ್ಷತ್ ಗಾರ್ಗ್ ಸಾವನ್ನಪ್ಪಿದ್ದಾರೆ. ಅಪಘಾತದ ದೃಶ್ಯವನ್ನು ಬೈಕ್ ಸವಾರ ಸ್ನೇಹಿತನ ಗೋಪ್ರೊ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ. ಈ ಬಗ್ಗೆ ಮೃತನ ಸ್ನೇಹಿತ ಪ್ರದ್ಯುಮನ್ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ. ಆಲ್ಕೋಹಾಲ್ ಅಥವಾ ಡ್ರಗ್ ಪರೀಕ್ಷೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪೊಲೀಸರು ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ಎಸ್‌ಯುವಿಯನ್ನು ವಶಪಡಿಸಿಕೊಳ್ಳಲಾಗಿದೆ.
ಸೆಕ್ಷನ್ 106 (ನಿರ್ಲಕ್ಷ್ಯದಿಂದ ಸಾವು), ಸೆಕ್ಷನ್ 281 (ಅತಿ ವೇಗ) ಮತ್ತು ಸೆಕ್ಷನ್ 324 (4) (ರೂ. 20,000 ಕ್ಕಿಂತ ಹೆಚ್ಚಿನ ಹಾನಿ ಉಂಟುಮಾಡುವ ಅಪರಾಧ) ಸೇರಿದಂತೆ ಮೋಟಾರು ವಾಹನ ಕಾಯ್ದೆಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.