ಹಾಸನ : ನಗರಸಭೆ 2023-24ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ನಗರದ 6 ವಾರ್ಡ್ಗಳಿಗೆ ಅಂದಾಜು 69.71 ಲಕ್ಷಗಳ ವಿಶೇಷ ಅನುದಾನ ಬಿಡುಗಡೆಯಾಗಿದ್ದು,
ಸದರಿ ಅನುದಾನದಡಿ ವಾರ್ಡ್ 9 ರ ಎಂ.ಜಿ ರಸ್ತೆಯಲ್ಲಿ ಅಂದಾಜು 15 ಲಕ್ಷಗಳ ವೆಚ್ಚದ ಚರಂಡಿ ಹಾಗೂ ಇತರೆ ಕಾಮಗಾರಿಗಳಿಗೆ ಶಾಸಕರಾದ ಸ್ವರೂಪ್ ಪ್ರಕಾಶ್ ಮತ್ತು ನಗರಸಭೆ ಅಧ್ಯಕ್ಷರಾದ ಚಂದ್ರೇಗೌಡ ಎಂ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯರು ಮತ್ತಿತರರು ಉಪಸ್ಥಿತರಿದ್ದರು.