ಚಿತ್ರದುರ್ಗ: ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಚಿತ್ರದುರ್ಗ ಪಟ್ಟಣದ ಕೆಳಗಿನ ಕೋಟೆಯಲ್ಲಿರುವ ಚನ್ನಕೇಶವ ದೇವಸ್ಥಾನದ ಆವರಣವನ್ನು ಗುರುವಾರ ಸ್ವಚ್ಛಗೊಳಿಸಿದರು.
ಆಯುಷ್ ಜಿಲ್ಲಾ ಕಚೇರಿ, ಚಿನ್ಮಯ್ ಮಯೂರ್ ಯೋಗ ಕ್ರೀಡಾ ಸಂಸ್ಕೃತಿ ಸಂಸ್ಥೆ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಸ್ವಚ್ಛತೆ ನಡೆಸಲಾಯಿತು.
ಚಂದ್ರಕಥಾ ಜಿಲ್ಲಾ ಆಯುಷ್ ಅಧಿಕಾರಿ ಎಸ್.ನಾಗಸಮುದ್ರ ಮಾತನಾಡಿ, ದೇಹ ಸ್ವಚ್ಛವಾಗಿದ್ದಾಗ ದೈಹಿಕ ಆರೋಗ್ಯ, ಮನಸ್ಸು ಸ್ವಚ್ಛವಾಗಿದ್ದಾಗ ಮಾನಸಿಕ ಆರೋಗ್ಯ, ಪರಿಸರ ಸ್ವಚ್ಛವಾಗಿದ್ದಾಗ ಸಮಾಜ ಸ್ವಾಸ್ಥ್ಯವಾಗಿರುತ್ತದೆ ಎಂದರು. ಈ ಅಭಿಯಾನದ ಅಂಗವಾಗಿ ಧಾರ್ಮಿಕ ಕ್ಷೇತ್ರ ಶ್ರೀ ಚನ್ನಕೇಶವ ಆವರಣವನ್ನು ಸ್ವಚ್ಛಗೊಳಿಸಲಾಗುವುದು ಎಂದರು.
ಆಯುಷ್ ಜಿಲ್ಲಾಸ್ಪತ್ರೆ, ಆಯುಷ್ ಜಿಲ್ಲಾ ಆಸ್ಪತ್ರೆ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಆಯುಷ್ ವೈದ್ಯರು, ಯೋಗ ಸಂಸ್ಥೆಯ ಪದಾಧಿಕಾರಿಗಳಾದ ರವಿ ಅಂಬೇಕರ್, ಮುರಳಿ, ಸುನೀತಾ, ಮಂಜುಳಾ, ವಸಂತಲಕ್ಷ್ಮಿ, ಮಂಜುನಾಥ್, ಸದಸ್ಯರು ಹಾಗೂ ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಮಂಜುನಾಥ್, ಮುಖಂಡರಾದ ಪ್ರಕಾಶ್ ಅವರು ತಮ್ಮ ಸಹಕಾರವನ್ನು ವಿಸ್ತರಿಸಿದ್ದಾರೆ.