ಉಡುಪಿ, ಸೆಪ್ಟೆಂಬರ್ 26 : ವಿದ್ಯುತ್ ಕಂಬದಲ್ಲಿ ಸಮಸ್ಯೆ ಇರುವುದನ್ನು ಮನಗಂಡ ಸಿಬ್ಬಂದಿ ಹಗ್ಗದ ಸಹಾಯದಿಂದ ಹೊಳೆ ದಾಟಿ ದುರಸ್ತಿ ಕಾರ್ಯ ನಡೆದಿದೆ. ಮೆಸ್ಕಾಂ ನೌಕರರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಮುಡಸಾಲಿ ಗ್ರಾಮದಿಂದ ಸ್ಥಳೀಯರು ಕರೆ ಮಾಡಿ ವಿದ್ಯುತ್ ವ್ಯತ್ಯಯ ಕುರಿತು ದೂರು ನೀಡಿದ್ದಾರೆ. ಕರೆ ಸ್ವೀಕರಿಸಿದ ಮೆಸ್ಕಾಂ ಹೆಬ್ರಿ ಶಾಖೆಯ ನೌಕರ ಪ್ರಮೋದ್ ಅವರಿಗೆ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾಗಿ ಸಮಸ್ಯೆ ಬಗೆಹರಿಸಿದರು.
ದೂರು ದಾಖಲಾದ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಿಬ್ಬಂದಿ ತೊರೆ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರಮೋದ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.