ಚಿತ್ರದುರ್ಗ : ಹಿಂದೂ ಮಹಾ ಗಣಪತಿ ಶೋಭಾ ಯಾತ್ರೆಯ ಸಂದರ್ಭದಲ್ಲಿ ದರ್ಶನ್ ಭಕ್ತರು ಬೃಹತ್ ಭಾವಚಿತ್ರದೊಂದಿಗೆ ಭಾವುಟಕ್ಕೆ ಪೂಜೆ ಸಲ್ಲಿಸಿದರು. ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಧ್ವಜಾರೋಹಣ ಮಾಡಿದರು. ದರ್ಶನ್ ಅಭಿಮಾನಿಗಳು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ಕೆಲಕಾಲ ವಾಗ್ವಾದ ನಡೆದಿದ್ದು, ಈ ನಡುವೆ ಪೊಲೀಸರು ಧ್ವಜ ತೆಗೆದಿದ್ದಾರೆ.
ದರ್ಶನ್ ಅಭಿಮಾನಿಗಳು ಇಂದು ಮಹಾಗಣಪತಿಯ ಶೋಭಾ ಯಾತ್ರೆಯಲ್ಲಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸುತ್ತಿರುವ ಚಿತ್ರನಟ ದರ್ಶನ್ ಅವರ ಚಿತ್ರಪಟವನ್ನು ಅನಾವರಣ ಮಾಡಲು ಮುಂದಾದರು ಇದನ್ನು ಗಮನಿಸಿದ ಸ್ಥಳೀಯ ಪೊಲೀಸರು ಅಭಿಮಾನಿ ಹತ್ತಿರವಿದ್ದ ಚಿತ್ರಪಟವನ್ನು ತಕ್ಷಣ ತೆರವುಗೊಳಿಸಲು ಮುಂದಾದರು ಸ್ವಲ್ಪ ಸಮಯದ ನಂತರ ಪೊಲೀಸರು ಮತ್ತು ಸ್ಥಳೀಯ ಜನರ ನಡುವೆ ವಾಗ್ವಾದ ನಡೆದು ನಂತರ ಚಿತ್ರಪಟವನ್ನು ತೆರವುಗೊಳಿಸಿದರು.
ಇದೇ ರೀತಿ ಬೇರೆ ಬೇರೆ ಚಿತ್ರ ನಟದ ಭಾವಚಿತ್ರವು ಸಹ ನೆರವೇರಿತು ಇದರಲ್ಲಿ ಸುದೀಪ್ ಮತ್ತು ಅಪ್ಪು ಚಿತ್ರ ಪಟವು ಮೆರವಣಿಗೆಯಲ್ಲಿ ಕಾಣಿಸಿದ್ದು ವಿಶೇಷವಾಗಿತ್ತು ಯಾವುದೇ ವಿಘ್ನವಿಲ್ಲದೆ, ನಿರಾತಂಕವಿಲ್ಲದೆ, ಶೋಭ ಯಾತ್ರೆ ನೆರವೇರಿತು.