ಹಾಸನ ಅ.02 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮಹಾತ್ಮ ಗಾಂಧೀಜಿಯವರ 154 ನೇ ಜಯಂತಿಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ/ಸ್ನಾತಕೊತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 3000/-, ದ್ವಿತೀಯ ಬಹುಮಾನ 2000/-, ತೃತೀಯ ಬಹುಮಾನ 1000/- ರೂ. ನಗದು ಬಹುಮಾನನ್ನು ಇಂದು ನಗರದ ಗಾಂಧಿ ಭವನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಪ್ರೌಢಶಾಲಾ ವಿಭಾಗದಲ್ಲಿ ಹಾಸನ ಜೆ.ಎಂ ಮೆಮೋರಿಯಲ್ ಸ್ಕೂಲ್‌ನ ಆಯೇಶಾ ಸಿದ್ದಿಕಾ ಪ್ರಥಮ ಬಹುಮಾನ ಹಗರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಡ ಶಾಲಾ ವಿಭಾಗದ) ತ್ರಿಶಾ ದ್ವೀತಿಯ ಬಹುಮಾನ ಅರಕಲಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಬಾಲಕಿಯರ) ಸರ್ಕಾರಿ ಪ್ರೌಡ ಶಾಲೆಯ ಮಾನ್ಯ ಆರ್ ತೃತೀಯ ಬಹುಮಾನ ನೀಡಲಾಯಿತು.
ಪದವಿ ಪೂರ್ವ ವಿಭಾಗದಲ್ಲಿ ಹಾಸನ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ರಾಮ ಪ್ರಸಾದ್ ನಾಯಕ್ ಪ್ರಥಮ ಬಹುಮಾನ, ಸಕಲೇಶಪುರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಮ್ಯ ಟಿ.ಕೆ ದ್ವಿತೀಯ ಬಹುಮಾನ ಹಳ್ಳಿ ಮೈಸೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಕ್ಷಿತ ತೃತೀಯ ಬಹುಮಾನ ನೀಡಲಾಯಿತು.
ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಹಾಸನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವರ್ಷಿತ ಪ್ರಥಮ ಬಹುಮಾನ, ಹಾಸನ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಕೀರ್ತನ ದ್ವಿತೀಯ ಬಹುಮಾನ, ಹಾಸನ ಗಂಧದ ಕೋಠಿ ಸರ್ಕಾರಿ ಮಹಿಳಾ, ಪ್ರಥಮ ದರ್ಜೇ ಕಾಲೇಜಿನ ಚಂದ್ರಕಲಾ ಕೆ ತೃತೀಯ ಬಹುಮಾನವನ್ನು ವಿತರಿಸಲಾಯಿತು.