Breaking
Mon. Dec 23rd, 2024

ವಿಶ್ವ ರೇಬಿಸ್ ದಿನಾಚರಣೆ : ಉಚಿತ ರೇಬೀಸ್ ನಿರೋಧಕ ಲಸಿಕೆ….!

ಚಿತ್ರದುರ್ಗ : ಪಶುವೈದ್ಯಕೀಯ ಪಾಲಿಕ್ಲಿನಿಕ್ ವತಿಯಿಂದ ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ 2024ರ ಸೆ.28 ರಿಂದ ಅ.28ರ ವರೆಗೆ ಉಚಿತ ರೇಬೀಸ್ ನಿರೋಧಕ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ನಗರದ ಪಶುವೈದ್ಯಕೀಯ ಪಾಲಿಕ್ಲಿನಿಕ್‌ನಲ್ಲಿ ಬೆಳಿಗೆ 9 ರಿಂದ ಮಧ್ಯಾಹ್ನ 1 ರವರೆಗೆ ಹಾಗೂ ಮದ್ಯಾಹ್ನ 2 ರಿಂದ 4 ಗಂಟೆಯವರೆಗೆ ಉಚಿತ ರೇಬೀಸ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ತಿಳಿಸಿದೆ.

ಈ ಸೌಲಭ್ಯವು ಜಿಲ್ಲೆಯ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ಪಶು ವೈದ್ಯಕೀಯ ಪಾಲಿಕ್ಲಿನಿಕ್ ನಿರ್ದೇಶಕ ಡಾ.ಎಸ್.ಎನ್.ಹರೀಶ್ ತಿಳಿಸಿದ್ದಾರೆ.

Related Post

Leave a Reply

Your email address will not be published. Required fields are marked *