Breaking
Mon. Dec 23rd, 2024

ಸ್ನಾತಕೋತ್ತರ ಪದವಿ/ಡಿಪ್ಲೊಮಾ/ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ, ನವೆಂಬರ್ 09 ಕುವೆಂಪು ವಿಶ್ವವಿದ್ಯಾಲಯದ 

2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಯು.ಯು.ಸಿ.ಎಂ.ಎಸ್. ಪೋರ್ಟಲ್ ಮೂಲಕ ಅ.30 ರೊಳಗಾಗಿ ಅರ್ಜಿ ಸಲ್ಲಿಸಬಹುದು. 

ಪ್ರವೇಶಾತಿಗೆ ಸಂಬAಧಿಸಿದ ಸೂಚನೆಗಳು: 

 ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ನಾತಕೋತ್ತರ/ ಡಿಪ್ಲೋಮಾ/ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಪ್ರವೇಶಾತಿಯನ್ನು ಯು.ಯು.ಸಿ.ಎಂ.ಎಸ್. (ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ) ಪೋರ್ಟಲ್ ಮೂಲಕ ಮಾಡಲಾಗುವುದು. ಯು.ಯು.ಸಿ.ಎಂ.ಎಸ್.ಗೆ ಸಂಬAಧಿಸಿದ ಎಲ್ಲಾ ಮಾಹಿತಿಯು https://uucms.karnataka.gov.in/Login/Index ನಲ್ಲಿ ಲಭ್ಯವಿರುತ್ತದೆ.

 ವಿಶ್ವವಿದ್ಯಾಲಯದ ಆವರಣ, ಶಂಕರಘಟ್ಟ., ಸ್ನಾತಕೋತ್ತರ ಕೇಂದ್ರ ಕಡೂರು ಹಾಗೂ ಚಿಕ್ಕಮಗಳೂರು, ಸಹ್ಯಾದ್ರಿ ಕಾಲೇಜು ಆವರಣ, ಶಿವಮೊಗ್ಗ ಮತ್ತು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಲಭ್ಯವಿರುವಂತೆ ಕೋರ್ಸ್ಗಳಿಗೆ ಪ್ರವೇಶಾತಿ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು https://uucms.karnataka.gov.in/Login/Index ನಲ್ಲಿ ಲಭ್ಯವಿರುವ ಯುಯುಸಿಎಂಎಸ್ ಪೋರ್ಟಲ್ ಮೂಲಕ ಅರ್ಜಿಸಲ್ಲಿಸುವುದು. ಹಾಗೂ ಅರ್ಜಿ ಮತ್ತು ಸಂಬAಧಪಟ್ಟ ದಾಖಲೆಗಳನ್ನು (ಹಾರ್ಡ್ ಕಾಪಿ) ಸಂಬAಧಿಸಿದ ಸ್ನಾತಕೋತ್ತರ ವಿಭಾಗಗಳಿಗೆ ಕಡ್ಡಾಯವಾಗಿ ಸಲ್ಲಿಸುವುದು.

 ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ (ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ) ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ನಡೆಸಲಾಗುವ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ಸೇರಲು ಇಚ್ಛಿಸುವ ವಿದ್ಯಾರ್ಥಿಗಳು ಯುಯುಸಿಎಂಎಸ್ ಪೋರ್ಟಲ್ (https://uucms.karnataka.gov.in/Login/Index) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸುವುದು.

 ಅರ್ಜಿ ಶುಲ್ಕ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ರೂ.350/-, ಎಸ್ಸಿ/ಎಸ್‌ಟಿ/ಪ್ರವರ್ಗ-1 ವಿದ್ಯಾರ್ಥಿಗಳಿಗೆ ರೂ.175/- ಆಗಿರುತ್ತದೆ. ವಿದ್ಯಾರ್ಥಿಗಳು ಯುಯುಸಿಎಂಎಸ್ ಪೋರ್ಟಲ್ ಮೂಲಕ ಒಂದಕ್ಕಿAತ ಹೆಚ್ಚು ಸ್ನಾತಕೋತ್ತರ ವಿಭಾಗಗಳಿಗೆ ಮೇಲೆ ನಿಗದಿಪಡಿಸಲಾದಂತೆ ಅರ್ಜಿ ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಬಹುದಾಗಿದೆ.

 ಇ- ವಿವರಣಾ ಪುಸ್ತಕವನ್ನು ಕುವೆಂಪು ವಿಶ್ವವಿದ್ಯಾಲಯದ ವೆಬ್‌ಸೈಟ್ www.kuvempu.ac.in ನಿಂದ ಪಡೆದುಕೊಳ್ಳುವುದು. ಹಾಗೂ ಪ್ರವೇಶಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಕಛೇರಿ ವೇಳೆಯಲ್ಲಿ ಇ-ವಿವರಣಾ ಪುಸ್ತಕದಲ್ಲಿರುವ ಸಂಬAಧಪಟ್ಟ ವಿಭಾಗಗಳಿಂದ ದೂರವಾಣಿ ಮೂಲಕ ಪಡೆಯಬಹುದಾಗಿದೆ.

 ಅಂತಿಮ ವರ್ಷದ ಪದವಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ, ಅವರು ಇಂಟರ್‌ನೆಟ್ ಮೂಲಕ ಡೌನ್ಲೋಡ್ ಮಾಡಿದ ಅಂಕಪಟಿಯನ್ನು ಪ್ರಾಂಶುಪಾಲರಿAದ ‘ದೃಢೀಕರಿಸಿ ಸಲ್ಲಿಸತಕ್ಕದ್ದು. 

 ವಿಶ್ವವಿದ್ಯಾಲಯದ ಆವರಣ, ಶಂಕರಘಟ್ಟಿ, ಸ್ನಾತಕೋತ್ತರ ಕೇಂದ್ರ ಕಡೂರು ಹಾಗೂ ಚಿಕ್ಕಮಗಳೂರು, ಸಹ್ಯಾದ್ರಿ ಕಾಲೇಜು ಆವರಣ, ಶಿವಮೊಗ್ಗ ಮತ್ತು ವಿಶ್ವವಿದ್ಯಾಲಯದ ಘಟಕ / ಸಂಯೋಜಿತ ಕಾಲೇಜುಗಳಲ್ಲಿರುವ ಸ್ನಾತಕೋತ್ತರ ವಿಭಾಗಗಳಲ್ಲಿ ಪ್ರವೇಶಾತಿಗೆ ಲಭ್ಯವಿರುವ ಸೀಟುಗಳ ವಿವರ ಹಾಗೂ ನಿಗದಿಪಡಿಸಲಾಗಿರುವ ಪ್ರವೇಶಾತಿ ಶುಲ್ಕದ ವಿವರಗಳನ್ನು ಇ-ವಿವರಣಾ ಪುಸ್ತಕದಲ್ಲಿ ಪಡೆಯಬಹುದಾಗಿದೆ.

 ಕುವೆಂಪು ವಿಶ್ವವಿದ್ಯಾಲಯದ ನಿಯಮದ ಪ್ರಕಾರ ಹೊರರಾಜ್ಯ/ ಹೊರದೇಶದ ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಒಮ್ಮೆ ಪಾವತಿಸಲಾದ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂಪಾವತಿಸಲು ಅವಕಾಶವಿರುವುದಿಲ್ಲ.

 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿಯ ಪ್ರವೇಶಾತಿಗೆ ಅಕ್ಟೋಬರ್ 10 ಅರ್ಜಿ ಸಲ್ಲಿಕೆ ಆರಂಭ ದಿನ. ಮೆರಿಟ್ ಆಧಾರಿತ ಪಟ್ಟಿಯನ್ನು ನ.12 ರಂದು ಬಿಡುಗಡೆಗೊಳಿಸಲಾಗುವುದು. ಮೆರಿಟ್ ಹಾಗೂ ಸ್ಪೆಷಲ್ ಕೆಟಗರಿಗೆ ನ.14 ಹಾಗೂ ಮೆರಿಟ್ ಕಂ ಪೇಮೆಂಟ್‌ಗೆ ನ.15 ರಂದು ಪ್ರವೇಶಾತಿ ಕೌನ್ಸಿಲಿಂಗ್ ಮಾಡಲಾಗುವುದು ಎಂದು ಕುವೆಂಪು ವಿವಿಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related Post

Leave a Reply

Your email address will not be published. Required fields are marked *