ಬಳ್ಳಾರಿ : ಜೆಸ್ಕಾಂನ ಸಿರುಗುಪ್ಪ ಉಪ-ವಿಭಾಗದ ಎಲ್ಲಾ ರೈತರೂ ಹಾಗೂ ಸಾರ್ವಜನಿಕರೂ ಖಡ್ಡಾಯವಾಗಿ ಜೆಸ್ಕಾಂ ನಿಯಮ ಪಾಲಿಸಬೇಕು ಎಂದು ಜೆಸ್ಕಾಂನ ಸಿರುಗುಪ್ಪ ಉಪವಿಭಾಗದ ಸಹಾಯಕ ಕಾರ್ಯನಿರ್ವಾಕ ಅಭಿಯಂತರರು ತಿಳಿಸಿದ್ದಾರೆ.
ಜೆಸ್ಕಾಂ ಇಲಾಖೆಗೆ ಸಂಬAಧಪಟ್ಟ ವಿದ್ಯುತ್ ಕಂಬಗಳನ್ನು ಹತ್ತುವುದು, ವಿದ್ಯುತ್ ಪರಿವರ್ತಕಗಳ ದುರಸ್ಥಿ ಕಾರ್ಯಗಳನ್ನು ಮಾಡಿಕೊಳ್ಳುವುದು ಹಾಗೂ ಅನಧಿಕೃತವಾಗಿ ವಿದ್ಯುತ್ ಮಾರ್ಗಗಳನ್ನು ಎಳೆಯುವುದು ಇತ್ಯಾದಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಾಗ ವಿದ್ಯುತ್ ಅಘಾತಗಳು ಸಂಭವಿಸಿದ್ದಲ್ಲಿ ಜೆಸ್ಕಾಂ ಇಲಾಖೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಅವರು ಸೂಚನೆ ನೀಡಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ವಿದ್ಯುತ್ ಸಂಬAಧಿತ ದೂರುಗಳಿದ್ದಲ್ಲಿ ಜೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.