ಚೆನ್ನೈ: ಶಾರ್ಜಾಕ್ಕೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ತಮಿಳುನಾಡಿನ ತಿರುಚ್ಚಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಿಲುಕಿಕೊಂಡಿದೆ.
141 ಪ್ರಯಾಣಿಕರಿದ್ದ ವಿಮಾನವು ತಿರುಚ್ಚಿ ವಿಮಾನ ನಿಲ್ದಾಣದಿಂದ ಸಂಜೆ 5:45 ಕ್ಕೆ ಟೇಕಾಫ್ ಆದ ನಂತರ ಲ್ಯಾಂಡಿಂಗ್ ಗೇರ್ ಸಮಸ್ಯೆಯನ್ನು ಅನುಭವಿಸಿತು. ಕೊನೆಗೆ ವಿಮಾನವನ್ನು ಸುರಕ್ಷಿತವಾಗಿ ತಮಿಳುನಾಡಿನ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ಶಾರ್ಜಾಕ್ಕೆ ಹೊರಟಿದ್ದ ಎಎಕ್ಸ್‌ಬಿ 613 ವಿಮಾನವು ತಿರುಚಿರಾಪಳ್ಳಿಯಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಹೈಡ್ರಾಲಿಕ್ ದೋಷವನ್ನು ವರದಿ ಮಾಡಿದೆ. ವಿಮಾನದಲ್ಲಿ 144 ಪ್ರಯಾಣಿಕರಿದ್ದರು.
ಇಂಧನವನ್ನು ಸುಡಲು ವಿಮಾನ ಇನ್ನೂ ತಿರುಚಿರಾಪಳ್ಳಿಯನ್ನು ಸುತ್ತುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್ ರಾಡಾರ್ ಪ್ರಕಾರ, ವಿಮಾನವು ಸುಮಾರು ಎರಡು ಗಂಟೆಗಳ ಕಾಲ ಅದೇ ಪ್ರದೇಶದಲ್ಲಿ ಸುತ್ತಿತು.