Breaking
Mon. Dec 23rd, 2024

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ದೇವರ ಎತ್ತು ಹಾಗೂ ಬಿಡಾಡಿ ದನಗಳಿಗೆ ಲಸಿಕೆ ನೀಡಿ ಅ.21 ರಿಂದ ನ.20 ರವರೆಗೆ ಕಾಲುಬಾಯಿ ರೋಗ ಲಸಿಕಾ ಅಭಿಯಾನ….!

ಚಿತ್ರದುರ್ಗ : ಜಿಲ್ಲೆಯಾದ್ಯಂತ ಇದೇ ಅ.21 ರಿಂದ ನ.20 ರವರೆಗೆ ನಡೆಯಲಿರುವ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ಮನೆ ಮನೆಗಳಿಗೆ ತೆರಳಿ ಜಾನುವಾರಗಳಿಗೆ ಲಸಿಕೆ ನೀಡುವುದರ ಜೊತೆಗೆ ದೇವರ ಎತ್ತುಗಳು ಹಾಗೂ ನಗರ ಪ್ರದೇಶದಲ್ಲಿನ ಬಿಡಾಡಿ ದನಗಳಿಗೂ ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲಸಿಕಾ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ಯಾವುದೇ ಜಾನುವಾರುಗಳು ಲಸಿಕೆಯಿಂದ ತಪ್ಪಿಸಿಕೊಳ್ಳಬಾರದು. ಶೇ.100 ರಷ್ಟು ಲಸಿಕಾಕರಣ ಗುರಿ ತಲುಪಬೇಕು. ಲಸಿಕೆ ನೀಡಿದ ಪ್ರತಿ ಜಾನುವಾರು ಮಾಹಿತಿಯನ್ನು ತಪ್ಪದೇ ತಂತ್ರಾಂಶದಲ್ಲಿ ವರದಿ ಮಾಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

20ನೇ ಜಾನುವಾರು ಗಣತಿ ಆಧಾರಿಸಿ ಜಿಲ್ಲೆಯಲ್ಲಿ 3,38,907 ಜಾನುವಾರುಗಳಿವೆ ಅಂದಾಜಿಸಲಾಗಿದೆ. 6 ತಾಲ್ಲೂಕುಗಳಲ್ಲಿ 991 ಗ್ರಾಮಗಳನ್ನು ಲಸಿಕಾಕರಣ ಕಾರ್ಯಕ್ಕೆ ಗುರುತಿಸಿ, 3390 ಬ್ಲಾಕ್‍ಗಳನ್ನಾಗಿ ವಿಭಾಗಿಸಲಾಗಿದೆ. 291 ಲಸಿಕಾದಾರರು ಮನೆಗಳಿಗೆ ತೆರಳಿ ಲಸಿಕೆ ನೀಡಲಿದ್ದಾರೆ. ಈ ಹಿಂದೆ ಜರುಗಿದ 5ನೇ ಸುತ್ತಿನ ಲಸಿಕಾ ಕಾರ್ಯಕ್ರಮದಲ್ಲಿ 1,89,030 ದನಗಳು ಹಾಗೂ 83273 ಎಮ್ಮೆಗಳು ಸೇರಿ ಒಟ್ಟು 2,72,303 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. 5ನೇ ಸುತ್ತಿನ ಉಳಿಕೆ ಲಸಿಕೆ ಅಭಿಯಾನದಲ್ಲಿ 16,350 ಡೋಸ್ ಲಸಿಕೆ ಉಳಿದಿದ್ದು, 2,73,350 ಲಸಿಕಾ ಡೋಸ್‍ಗಳು ಸರಬರಾಜು ಆಗಿವೆ. ಒಟ್ಟು 2,89,700 ಲಸಿಕೆ ಡೋಸ್ ಸಂಗ್ರಹ ಲಭ್ಯವಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕುಮಾರ್ ಸಭೆಯಲ್ಲಿ ಮಾಹಿತಿ ನೀಡಿದರು.

ಬೀದಿನಾಯಿಗಳ ಸಂತಾನ ನಿಯಂತ್ರಣ ಕ್ರಮಕೈಗೊಳ್ಳಿ: ನಗರ ಹಾಗೂ ಪಟ್ಟಣ ಪಂಚಾಯಿತಿ ಪ್ರದೇಶಗಳಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಮುಖ್ಯ ಬೀದಿಗಳಲ್ಲೇ ರಾತ್ರಿ ವೇಳೆ ಜನರ ಮೇಲೆ ಬೀದಿನಾಯಿಗಳು ಆಕ್ರಮಣ ಮಾಡಿದ ಘಟನೆಗಳು ವರದಿಯಾಗಿವೆ. ನಗರ ಸಭೆ ಹಾಗೂ ಪಶು ಇಲಾಖೆಯಿಂದ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಜಿ.ಪಂ.ಸಿಇಓ ಎನ್.ಜೆ.ಸೋಮಶೇಖರ್ ಹೇಳಿದರು.

ಅ.28 ರವರೆಗೆ ನಡೆಸುತ್ತಿರುವ ಉಚಿತ ರೇಬೀಸ್ ನಿರೋಧಕ ಲಸಿಕಾ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ಲಸಿಕೆ ನೀಡಬೇಕು. ಈ ಕುರಿತು ದಿನಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

ನೇರ ಕರೆ ಸ್ವೀಕರಿಸಿ ಚಿಕಿತ್ಸೆ ನೀಡಿ : ಸಹಾಯವಾಣಿ ಸಂಖ್ಯೆ 1962 ಕರೆ ಮಾಡಿ ಸಂಚಾರಿ ಪಶು ಚಿಕಿತ್ಸಾಲಯದಿಂದ ಸ್ಪಂದಿಸುವುದರಲ್ಲಿ ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕರು ದೂರು ಕೇಳಿ ಬಂದಿದೆ. ಸಹಾಯವಾಣಿ ಮೂಲಕ ಬರುವ ಕರೆಯ ಹೊರತಾಗಿಯೂ ಪಶು ಚಿಕಿತ್ಸಾಲಯದ ಸಿಬ್ಬಂದಿ ನೇರವಾಗಿ ಕರೆ ಸ್ವೀಕರಿಸಿ, ತೊಂದರೆಯಲ್ಲಿರುವ ಜಾನುವಾರುಗಳಿಗೆ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿ ಸಭೆಯಲ್ಲಿ ನಿರ್ದೇಶನ ನೀಡಿದರು.  

ಸಂಚಾರಿ ಪಶು ಚಿಕಿತ್ಸಾಲಯ ಸಿಬ್ಬಂದಿ ವಿವರ ಹಾಗೂ ದೂರವಾಣಿ ಸಂಖ್ಯೆ: ಚಿತ್ರದುರ್ಗ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಬೊಮ್ಮಯ್ಯ (9449833233), ಸಹಾಯಕ ಶಿವಕುಮಾರ್(7760085054), ವಾಹನ ಚಾಲಕ ಶಶಿಕುಮಾರ್ (9019220814).

ಚಳ್ಳಕೆರೆ ತಾಲ್ಲೂಕು ಪಶುವೈದ್ಯಾಧಿಕಾರಿಗಳಾದ ಡಾ.ರವಿಕಿರಣ್.ಎಸ್. (9164624877), ಡಾ.ಓಎನ್.ರವಿ(944802906), ಸಹಾಯಕರಾದ ಚಂದ್ರೋದಯ.ಎಂ (9591901962), ರಮೇಶ್(9880147536), ವಾಹನ ಚಾಲಕರದ ಸಿದ್ದೇಶ್ (7348827181), ಸೈಯದ್ ಹುಸೇನ್ (8861933434).

ಹಿರಿಯೂರು ತಾಲ್ಲೂಕು ಪಶುವೈದ್ಯಾಧಿಕಾರಿಗಳಾದ ಡಾ.ಎ.ಸಿಂಧು (9632917518), ಡಾ.ಕೆ.ಎನ್.ತಿಮ್ಮಣ್ಣ (9449128202), ಸಹಾಯಕರಾದ ರುದ್ರಕುಮಾರ್ (9972488420), ಸುರೇಶ್ (6360466488), ವಾಹನ ಚಾಲಕರಾದ ನಂದನ್ (7406382315), ಗೌತಮ್(7022875907).

ಹೊಳಲ್ಕೆರೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ರವಿಶಂಕರ್ (9738210553), ಸಹಾಯಕರಾದ ಮನೋಜ್ (8197783171) ಚಾಲಕರಾದ ವಿವೇಕ್ (8088141189).

ಹೊಸದುರ್ಗ ತಾಲ್ಲೂಕು ಪಶುವೈದ್ಯಾಧಿಕಾರಿಗಳಾದ ಡಾ.ಹರೀಶ್ (7619604614), ಡಾ.ಪ್ರದೀಪ್ (8073931121), ಸಹಾಯಕರಾದ ಶಶಿಕುಮಾರ್ (9900211809), ಪ್ರಜ್ವಲ್ (8150094960), ವಾಹನ ಚಾಲಕರಾದ ಅಭಿಷೇಕ್ (9535197186), ಕುಮಾರ್ (8217780338).

ಮೊಳಕಾಲ್ಮೂರು ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಪುನೀತ್ (9148504082), ಸಹಾಯಕ ತಿಪ್ಪೇಸ್ವಾಮಿ (9164433430) ಚಾಲಕ ರೆಹಮಾನ್ (9972236623) ಸಂಪರ್ಕಿಸಬಹುದು.

ಇದೇ ಸಂದರ್ಭದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಹಾಗೂ ರೇಬಿಸ್ ರೋಗ ತಡೆ ಕುರಿತು ಪೋಸ್ಟರ್‍ಗಳನ್ನು ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್ ಸೇರಿದಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯ ನಿರ್ದೇಶಕರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Related Post

Leave a Reply

Your email address will not be published. Required fields are marked *