ಬಳ್ಳಾರಿ,ಅ.17 : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸ್ತಕ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪಯೋಜನೆಯಡಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ವಿಡಿಯೋಗ್ರಫಿ, ಹೊಲಿಗೆ ತರಬೇತಿ ಉಚಿತ ಶಿಬಿರ ನೀಡಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೊಲಿಗೆ ತರಬೇತಿ: ವಿದ್ಯಾರ್ಹತೆಯು ಎಸ್‌ಎಸ್‌ಎಲ್‌ಸಿ ಉತ್ತೀರ್ಣ/ಅನುತ್ತೀರ್ಣ, ವಯೋಮಿತಿಯು 18 ರಿಂದ 40 ವರ್ಷ ಒಳಗಿರಬೇಕು. 20 ದಿನಗಳ ಶಿಬಿರ (ನ.07 ರಿಂದ ನ.26 ರ ವರೆಗೆ) ಇರಲಿದೆ.
ವಿಡಿಯೋಗ್ರಫಿ ತರಬೇತಿ: ವಿದ್ಯಾರ್ಹತೆಯು ದ್ವಿತೀಯ ಪಿಯುಸಿ ಉತ್ತೀರ್ಣ/ಅನುತ್ತೀರ್ಣ, ವಯೋಮಿತಿಯು 18 ರಿಂದ 40 ವರ್ಷ ಒಳಗಿರಬೇಕು. 12 ದಿನಗಳ ಶಿಬಿರ (ನ.15 ರಿಂದ ನ.26 ರ ವರೆಗೆ) ಇರಲಿದೆ.
ತರಬೇತಿ ನೀಡುವ ಸ್ಥಳ: ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣ.
ಆಸಕ್ತ ಪರಿಶಿಷ್ಟ ಜಾತಿಯ ಯುವಕ ಮತ್ತು ಯುವತಿಯರು ಇತ್ತೀಚಿನ ಭಾವಚಿತ್ರ ಹಾಗೂ ಜನ್ಮ ದಿನಾಂಕದ ದಾಖಲೆಗಳೊಂದಿಗೆ ಬೆಂಗಳೂರಿನ ನೃಪತುಂಗ ರಸ್ತೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೇಂದ್ರ ಕಚೇರಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಅಥವಾ ದೂ.08392-267932, ಮೊ.9480843023 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.