ಬಳ್ಳಾರಿ,ಅ.17 : ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರಿಗೆ ಡಯಾಲಿಸಸ್ ಸೇವೆ ಪಡೆಯಲು ವೈದ್ಯಕೀಯ ಮತ್ತು ಮಹಾವಿದ್ಯಾಲಯ (ಬಿಮ್ಸ್), ಬಳ್ಳಾರಿ ಜಿಲ್ಲಾ ಆಸ್ಪತ್ರೆ ಮತ್ತು ಸಂಡೂರು, ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಗಳ ಡಯಾಲಿಸಸ್ ಕೇಂದ್ರಗಳಲ್ಲಿ ಡಯಾಲಿಸಸ್ ಸೇವೆ ನೀಡಲಾಗುತ್ತಿದೆ, ಇದರ ಸೇವೆ ಸಾರ್ವಜನಿಕರಿಗೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಅವರು ತಿಳಿಸಿದರು.
ರಾಷ್ಟ್ರೀಯ ಪ್ರಧಾನಮಂತ್ರಿ ಡಯಾಲಿಸಸ್ ಸೇವೆ ಅನುಷ್ಟಾನ ಕಾರ್ಯಕ್ರಮದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಸ್ಥೆ (ಬಿಮ್ಸ್) ಹಾಗೂ ಖಾಸಗಿ ಡಯಾಲಿಸಸ್ ಆಸ್ಪತ್ರೆಗಳ ಅಧಿಕಾರಿಗಳು ಮತ್ತು ಡಯಾಲಿಸಸ್ ಸೇವೆಗಳ ಬಗ್ಗೆ ಬುಧವಾರದಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಏರ್ಪಡಿದ್ದನ್ವಯ ಸಭೆಯಲ್ಲಿ ಅವರು ಚರ್ಚಿಸಿದರು.
ಡಯಾಲೈಸರ್ ಮತ್ತು ಬ್ಲಡ್ ಟ್ಯೂಬಿಂಗ್ ಅನ್ನು ಒಬ್ಬರಿಗೆ ಬಳಸಿದರೆ ಅದೇ ವ್ಯಕ್ತಿಗೆ 5 ರಿಂದ 6 ಬಾರಿ ವೈದ್ಯಕೀಯವಾಗಿ ಅವಕಾಶವಿದ್ದು, ಸಾರ್ವಜನಿಕರು ಯಾವುದೇ ತಪ್ಪು ಮಾಡಿದವರಿಗೆ ಕಿವಿಗೊಡದೆ ಡಯಾಲಿಸಸ್ ಸೇವೆಯನ್ನು ಉಚಿತವಾಗಿ ಪಡೆಯಬಹುದು. ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ತೆರಳಿ ಹಣವೆಚ್ಚ ಮಾಡುವ ಅಗತ್ಯವನ್ನು ಮನವರಿಕೆ ಮಾಡಬೇಕು ಎಂದು ವೈದ್ಯರಿಗೆ ಸೂಚಿಸಿದರು.
ಬಿಮ್ಸ್‌ನಲ್ಲಿ 13 ಹಾಗೂ ಜಿಲ್ಲಾ ಆಸ್ಪತ್ರೆ 08, ಸಂಡೂರು ಸಾರ್ವಜನಿಕ ಆಸ್ಪತ್ರೆ 2 ಮತ್ತು ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಡಯಾಲಿಸಸ್ ಯಂತ್ರಗಳು ಲಭ್ಯವಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ಉಚಿತ ಸೇವೆಯನ್ನು ನೀಡಲಾಗುತ್ತದೆ.
ಡಯಾಲಿಸಸ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಬಳಸುವ ಡಯಾಲಸರ್ ಮತ್ತು ಬ್ಲಡ್ ಟ್ಯೂಬಿಂಗ್ ಅನ್ನು ಒಬ್ಬರಿಗೆ ಬಳಸಿದ ನಂತರ ಲೇಬಲ್ ಮಾಡಿ ಸುರಕ್ಷಿತವಾಗಿ ತೆಗೆದಿಡುವ ಮೂಲಕ ಅದೇ ವ್ಯಕ್ತಿಗೆ ಮರುಭೇಟಿಯ ವೇಳೆ ಅನುಕೂಲವಾಗುವಂತೆ ಅವಕಾಶವಿದೆ, ಇದನ್ನು ಕನಿಷ್ಠ 5 ರಿಂದ 6 ಬಾರಿ ಏಕವ್ಯಕ್ತಿಗೆ ಬಳಸಬಹುದು. ಸಾರ್ವಜನಿಕರು ತಪ್ಪು ಮಾಹಿತಿ ಪಡೆದರು. ಬಳ್ಳಾರಿ ನಗರದಲ್ಲಿ ಡಯಾಲಿಸಸ್ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಸಂಸ್ಥೆಗಳಲ್ಲಿಯೂ ಸಹ ಸರ್ಕಾರದ ಯಾಲಿಸಸ್ ಸೇವೆ ನೀಡುತ್ತಿರುವ ಪ್ರತಿ ಸೈಕಲ್‌ನ ದರ ಪಟ್ಟಿ ಕುರಿತು ಆಸ್ಪತ್ರೆಯಲ್ಲಿ ಚರ್ಚಿಸಲಾಗಿದೆ, ಅಲ್ಲಿಯೂ ಸಹ ಉಚಿತ ಸೇವೆಯನ್ನು ನೀಡಲು ಕ್ರಮವಹಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ನೀಡುವ ಸೇವೆಗಳನ್ನು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು ನಿರಂತರ ಭೇಟಿ ನೀಡುವ ಮೂಲಕ ಸೇವೆಗಳ ಕುರಿತು ಪರಿಶೀಲನೆ ಮತ್ತು ನಿಗಾವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಸಭೆಯಲ್ಲಿ ಬಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲ ರಮೇಶಬಾಬು, ಜಿಲ್ಲಾ ಶಾಸ್ತಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸವೇಕ್ಷಣಾಧಿಕಾರಿ ಹಾಗೂ ಪಿಎಂಎನ್‌ಡಿಪಿ ಅನುಷ್ಟಾನ ಡಾ.ಮರಿಯಂಬಿ.ವಿ.ಕೆ., ವಿಮ್ಸ್ ವೈದ್ಯಕೀಯ ಅಧಿಕಾರಿ ಡಾ.ಚಿದಂಬರಮೂರ್ತಿ, ಮಾನಸಿಕ ಕಾರ್ಯಕ್ರಮ ಅನುಷ್ಟಾನಾಧಿಕಾರಿ.ವಿರೇಂದ್ರ ಕುಮಾರ್, ಮೂತ್ರಪಿಂಡ ತಜ್ಞ ಡಾ.ಅನ್ವರ್.ಎಂ ಸೇರಿದಂತೆ ಡಾ.ರಾಘವೇಂದ್ರ, ಡಾ.ರಾಮಕೃಷ್ಣ, ಡಾ.ರೋಹನ್ ವನಗುಂದಿ, ಖಾಸಗಿ ಆಸ್ಪತ್ರೆಯ ತಜ್ಞ.ರವಿ, ಡಾ.ಶ್ರೀನಿವಾಸ್, ಡಾ.ಜಬೀನಾ ತಾಜ್, ಡಾ.ಮಯೂರಿ ಹಾಗೂ ಎಷ್ಟು ಉಪಸ್ಥಿತರಿದ್ದ. ರು.