ಬಳ್ಳಾರಿ : ಜಗತ್ತಿನ ಸುಪ್ರಸಿದ್ಧ ಮಹಾಕಾವ್ಯ ರಾಮಾಯಣ ರಚಿಸಿ ಮಹಾಪುರುಷ ಶ್ರೀರಾಮನ ಆದರ್ಶ ಜೀವನ ರೂಪದ ಪರಿಕಲ್ಪನೆ ತಿಳಿಸಿಕೊಟ್ಟಂತಹ ಮಹರ್ಷಿ ವಾಲ್ಮೀಕಿ ಪೂಜ್ಯರು ಅಪಾರ ಜ್ಞಾನ ಭಂಡಾರ ಹೊಂದಿದ್ದರು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ನಲ್ಲಚೆರವು ಪ್ರದೇಶದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಗುರುಗಳು ಮಹಾನ್ ಋಷಿ, ಪ್ರಸಿದ್ಧ ಕವಿ ಮಾತ್ರವಲ್ಲದೇ ಉತ್ತಮ ಆಡಳಿತಗಾರರಾದ್ದವರು. ಶಿಕ್ಷಣ, ಸಂಸ್ಕೃತಿ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಟ್ಟುಕೊಂಡು ರಾಮಾಯಣದಲ್ಲಿ ಉತ್ತಮ ಆಡಳಿತ ರೂಪುದರ್ಶನ ನೀಡಿದ್ದಾರೆ ಎಂದರು.
ಮಹರ್ಷಿ ವಾಲ್ಮೀಕಿ ಅವರು, ರಚಿಸಿದ ರಾಮಾಯಣ ಕೃತಿಯ ಮೂಲಕ ಪಿತೃತ್ವ, ಮಾತೃತ್ವ ಹಾಗೂ ಸತಿ-ಪತಿ ನಡುವಿನ ಸಂಬAಧದ ಕುರಿತ ಜೀವನ ಸಾರವನ್ನು ತಿಳಿಸಿಕೊಟ್ಟವರು ವಾಲ್ಮೀಕಿ. ವಾಲ್ಮೀಕಿ ಸಮುದಾಯದವರು ಮುಂದಿನ ದಿನಮಾನಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃಧ್ಧಿ ಹೊಂದಬೇಕು ಎಂದು ತಿಳಿಸಿದರು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣದಿಂದ ಇಂದು ನಾವೆಲ್ಲರೂ ಆದರ್ಶ ಪುರುಷ ಶ್ರೀರಾಮನನ್ನು ಜಪಿಸುತ್ತಿದ್ದೇವೆ. ವಾಲ್ಮೀಕಿ ಅವರ ಸಿದ್ಧಾಂತ ನಾವೆಲ್ಲರೂ ಪಾಲಿಸೋಣ ಎಂದು ಹೇಳಿದರು.
ಯುವಕರು ಶ್ರೀ ಮಹರ್ಷಿ ವಾಲ್ಮೀಕಿ ಅವರು ಹಾಕಿಕೊಟ್ಟ ದಾರಿದೀಪದಲ್ಲಿ ನಡೆದು, ಅಭಿವೃದ್ಧಿ ಪಥದತ್ತ ಸಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಮಾತನಾಡಿ, ಮಹಾಋಷಿ ವಾಲ್ಮೀಕಿ ಅವರ ರಾಮಾಯಣದಲ್ಲಿನ ಒಳ್ಳೆ ವಿಚಾರ-ಸಂದೇಶಗಳನ್ನು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಾಲ್ಮೀಕಿ ಸಮುದಾಯದ ಮಹಾನ್ ವ್ಯಕ್ತಿಗಳಾದ ಬಿಚ್ಚುಗತ್ತಿ ಭರ್ಮಣ್ಣ, ವೀರ ಮದಕರಿ ನಾಯಕ, ಹನುಮಪ್ಪ ನಾಯಕ ಹಾಗೂ ಗುಡೇಕೋಟೆಯ ಸಂಸ್ಥಾನ, ಕೂಡ್ಲಿಗಿಯ ಜರ್ಮಲಿ ಸಂಸ್ಥಾನವನ್ನು ಈ ದಿನ ಸ್ಮರಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಕವಿತ್ರಿ, ಲೇಖಕಿ ಹಾಗೂ ಕಲಬುರಗಿಯ ಕನ್ಯಾ ಪ್ರೌಢಶಾಲೆ ನೂತನ ವಿದ್ಯಾಲಯದ ಸಹಶಿಕ್ಷಕಿ ಲಕ್ಷಿö್ಮÃದೇವಿ.ಎಸ್ ರತ್ನಗಿರಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಲ್ಪಟ್ಟ ಮೊಟ್ಟ ಮೊದಲ ಐತಿಹಾಸಿಕ ಗ್ರಂಥವಾದ ರಾಮಾಯಣವು 24 ಸಾವಿರ ಶ್ಲೋಕಗಳನ್ನು ಹೊಂದಿದ್ದು, ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದರು.
ವಾಲ್ಮೀಕಿ ಅವರು ಋಷಿಗಳು, ಕವಿಗಳು, ಶಿಕ್ಷಕರು, ಸಮಾಜ ಚಿಂತಕರು, ಸ್ತಿçÃವಾದಿ, ಪರಿಸರ ಪ್ರೇಮಿಯಾಗಿದ್ದರು. ಅಷ್ಟೇ ಮಾತ್ರವಲ್ಲದೇ ಸಮಾಜದಲ್ಲಿನ ಹಿಂಸೆ, ಕ್ರೌರ್ಯ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿದವರು. ಪ್ರತಿಯೊಬ್ಬರೂ ರಾಮಾಯಣ ಓದಿ, ರಾಮರಾಜ್ಯದ ಪರಿಕಲ್ಪನೆ ತಿಳಿದುಕೊಂಡು ಸುಖ-ಸಮೃದ್ಧಿಯಿಂದ ಜೀವನ ನಡೆಸಬೇಕು ಎನ್ನುತ್ತಾ ಮಹರ್ಷಿ ವಾಲ್ಮೀಕಿ ಅವರ ಜೀವನ ಆದರ್ಶಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗಣ್ಯರು ಸೇರಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಿ.ರುದ್ರಪ್ಪ ಅವರು ರಾಮಾಯಣ ಸಾರವನ್ನು ಪಠಣೆ ಮಾಡಿದರು.
*ಸನ್ಮಾನ:*
ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಸ್ನಾತ್ತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಪಿಹೆಚ್‌ಡಿ ಪದವಿ ಪಡೆದವರಿಗೆ ಹಾಗೂ ಕಲಾವಿದರು, ಪ್ರಗತಿಪರ ರೈತರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದಕ್ಕೂ ಮುನ್ನ ಗಣ್ಯರು ನಗರದ ವಾಲ್ಮೀಕಿ ವೃತ್ತ(ಎಸ್‌ಪಿ ಸರ್ಕಲ್)ದಲ್ಲಿರುವ ವಾಲ್ಮೀಕಿ ಪ್ರತಿಮೆ ಹಾಗೂ ನಲ್ಲಚೇರವು ಪ್ರದೇಶದ ವಾಲ್ಮೀಕಿ ಭವನ ಆವರಣದಲ್ಲಿನ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದೊಡ್ಡಬಸಪ್ಪ ಗವಾಯಿ ತಂಡದಿAದ ಗೀತಾ ಗಾಯನ ನಡೆಯಿತು ಹಾಗೂ ಲಕ್ಮೀ ಕಲಾ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ನೃತ್ಯ ಮೈಮನ ಸೆಳೆಯಿತು.
*ಮೆರವಣಿಗೆ:*
ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯು ವಾಲ್ಮೀಕಿ ಪುತ್ಥಳಿಯೊಂದಿಗೆ ವಿವಿಧ ಕಲಾತಂಡಗಳು ವಾದ್ಯಗಳ ಜೊತೆಗೆ ಎಸ್‌ಪಿ ಸರ್ಕಲ್‌ನಿಂದ ದುರ್ಗಮ್ಮ ದೇವಸ್ಥಾನ, ಗಡಿಗಿ ಚೆನ್ನಪ್ಪ ವೃತ್ತ, ಹೆಚ್‌ಆರ್ ಗವಿಯಪ್ಪ ವೃತ್ತ, ಜೋಳದರಾಶಿ ದೊಡ್ಡನಗೌಡ ರಂಗ ಮಂದಿರ ಮೂಲಕ ವಾಲ್ಮೀಕಿ ಭವನಕ್ಕೆ ತಲುಪಿ ಸಂಪನ್ನಗೊAಡಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ನಂದೀಶ್, ವಕ್ಫ್ ಬೋರ್ಡ್ನ ಜಿಲ್ಲಾಧ್ಯಕ್ಷ ಹುಮಾಯನ್ ಖಾನ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಮಹರ್ಷಿ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ರಾಮ್ ಪ್ರಸಾದ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್.ಕೆ ಶಂಕಿನದಾಸರ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹೆಚ್.ಮಲ್ಲಿಕಾರ್ಜುನ ಸೇರಿದಂತೆ ಪಾಲಿಕೆಯ ಸದಸ್ಯರು, ಸಂಘ ಸಂಸ್ಥೆಗಳ ಜನ ಪ್ರತಿನಿಧಿಗಳು, ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು, ಮತ್ತಿತರರು ಉಪಸ್ಥಿತರಿದ್ದರು.