Breaking
Tue. Dec 24th, 2024

ತುಂತುರು ಮತ್ತು ಹನಿ ನೀರಾವರಿ ಘಟಕಗಳ ಉಪಯೋಗ ಮತ್ತು ನಿರ್ವಹಣೆ ಕುರಿತು ತರಬೇತಿ

ಚಿತ್ರದುರ್ಗ : ಹಿರಿಯೂರು ತಾಲ್ಲೂಕಿನ ಬಬ್ಬೂರು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಅ.21 ಮತ್ತು 22 ರಂದು ಬೆಳಿಗ್ಗೆ 10ಕ್ಕೆ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕಸಬಾ ಮತ್ತು ರಾಂಪುರ ಹೋಬಳಿ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಉಪಯೋಗ ಮತ್ತು ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿ ಕಾರ್ಯಕ್ರಮದಲ್ಲಿ ಡಾ. ರಾಜಶೇಖರ ಡಿ ಭಾರ್ಕರ್ ಸಹ ಪ್ರಾಧ್ಯಪಕರು, ಇಂಜಿನಿಯರಿಂಗ್ ವಿಭಾಗ, ತೋಟಗಾರಿಕೆ ಮಹಾ ವಿದ್ಯಾಲಯ, ಬಬ್ಬೂರು ಇವರು ನೀರಿನ ಸಮರ್ಥ ಬಳಕೆ, ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್ ಘಟಕಗಳ ಬಳಕೆ ಮತ್ತು ಅವುಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮತ್ತು ಪ್ರಾತ್ಯಕ್ಷಿಕೆ ನೀಡುವರು ಹಾಗೂ ಡಾ.ಶಶಿಧರ ಬಿ.ಜಿ. ನಿವೃತ್ತ ಪ್ರಾಧ್ಯಪಕರು (ಬೇಸಾಯಶಾಸ್ತ್ರ), ನೀರಾವರಿ ತಜ್ಞರು ಮತ್ತು ಸಲಹೆಗಾರರು ಇವರು ಕೃಷಿ ಸಾಲು ಬೆಳೆಗಳಲ್ಲಿ ಹನಿ ನೀರಾವರಿ ಪದ್ಧತಿಯ ಸಮರ್ಥ ಬಳಕೆ ಕುರಿತು ವಿಷಯ ಮಂಡನೆ ಮಾಡುತ್ತಾರೆ.

ಅ.21ರಂದು ಆಸಕ್ತ ಮೊಳಕಾಲ್ಮೂರು ತಾಲೂಕಿನ ಕಸಬಾ ಹೋಬಳಿಯ 60 ಜನ ರೈತಭಾಂದವರು ಮತ್ತು ಅ.22ರಂದು ಆಸಕ್ತ ರಾಂಪುರ ಹೋಬಳಿಯ ರೈತಭಾಂದವರ ತರಬೇತಿಯಲ್ಲಿ ಭಾಗವಹಿಸಿ ಮೊಬೈಲ್ ಸಂಖ್ಯೆ 8277931058 ಗೆ ಕರೆ ಮಾಡಿ ನೊಂದಾಯಿಸಲು ಶ್ರೀ ರಜನೀಕಾಂತ. ಆರ್ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿಕೇಂದ್ರ, ಬಬ್ಬೂರು ಫಾರಂ ಅವರು ಈ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದ್ದಾರೆ.

ಮೊದಲು ನೋಂದಣಿ ಮಾಡಿಕೊಂಡ 60 ಜನ ಭಾಂದವರಿಗೆ ಆದ್ಯತೆಯ ತರಬೇತಿಗೆ ಪರಿಗಣಿಸಿ ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್‌ಐಡಿ ಕಾರ್ಡ್, ರೇಷನ್ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿ ತರುವಂತೆ ರೈತ ಪ್ರಕಟಣೆಯನ್ನು ಪಡೆದಿದ್ದಾರೆ .

Related Post

Leave a Reply

Your email address will not be published. Required fields are marked *