ರಾಯಚೂರು : ರಾಯಚೂರು ತಾಲ್ಲೂಕಿನ ತುಂಗಭದ್ರಾ ಗ್ರಾಮದ ಬಳಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.
ಆಂಧ್ರಪ್ರದೇಶದ ಮಾಧವರಂ ಮೂಲದ ವೀರೇಶ್ (34) ಮೃತ ಪಾದಚಾರಿ. ವೀರೇಶ್ ಗಿಲ್ಲೆಸೂಗೂರಿನಿಂದ ಆಂಧ್ರಪ್ರದೇಶದ ಮಾಧವರಂಗೆ ತೆರಳುತ್ತಿದ್ದ ವೇಳೆ ರಾಯಚೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವೀರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಪಘಾತದ ನಂತರ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.