Breaking
Mon. Dec 23rd, 2024

ಗುತ್ತಿಗೆ ಆಧಾರದ ನೇಮಕಾತಿಗೆ ಅರ್ಜಿ ಆಹ್ವಾನ….!

ಶಿವಮೊಗ್ಗ : ಕೃಷಿ ಇಲಾಖೆಯಿಂದ ಅನುಷ್ಟಾನಗೊಳಿಸುತ್ತಿರುವ ಆಹಾರ ಮತ್ತು ಪೌಷ್ಟಿಕ ಭದ್ರತೆ ಸೌಲಭ್ಯದ ಜಿಲ್ಲಾ ಮಟ್ಟದ ಯೋಜನೆ ನಿರ್ವಹಣಾ ತಂಡದ ಸೇವೆಯನ್ನು ಪಡೆಯಲು ಗುತ್ತಿಗೆ ಆಧಾರದಲ್ಲಿ ಸಲಹೆಗಾರರು ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲಾಗಿದೆ.

ಜಿಲ್ಲಾ ಸಲಹೆಗಾರರು 01 ಹುದ್ದೆ ವಿದ್ಯಾರ್ಹತೆ ಬಿಎಸ್‌ಸಿ(ಕೃಷಿ) ಪದವಿ ಹಾಗೂ ಸ್ನಾತಕೋತ್ತರ ಪದವಿ, ತಾಂತ್ರಿಕ ಸಹಾಯಕರು 02 ಹುದ್ದೆ ವಿದ್ಯಾರ್ಹತೆ ಬಿ.ಎಸ್.ಸಿ(ಕೃಷಿ) ಪದವಿ, ಉತ್ತಮ ಕಂಪ್ಯೂಟರ್ ಪರಿಣಿತಿ, ಕೃಷಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಅನುಭವ ಇರುವವರಿಗೆ ಪ್ರಾಶಸ್ತ್ಯ ಕೊಡಲಾಗಿದೆ.

 ಈ ನೇಮಕಾತಿಯು ದಿ: 31-03-2025 ರವರೆಗೆ ಅಥವಾ ಕೃಷಿ ಆಯುಕ್ತಾಲಯದ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ. ಅಭ್ಯರ್ಥಿಗಳು ಸರ್ಕಾರಿ ಇಲಾಖೆ/ಸಂಸ್ಥೆಗಳಲ್ಲಿ ನಿವೃತ್ತಿಯಲ್ಲಿ (ಪಿಂಚಣಿ ಪಡೆಯುತ್ತಿದ್ದಲ್ಲಿ) ಈ ನೇಮಕಾತಿಗೆ ಅರ್ಹರಿಲ್ಲ.

 ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ವಿವರಿಸಿರುವ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು, ಗರಿಷ್ಟ ಸಾಮಾನ್ಯ 35, ಪ.ಜಾತಿ/ಪ.ಪಂ/ಪ್ರವರ್ಗ-1 40 ವರ್ಷಗಳು.

ಆಸಕ್ತರು ಅರ್ಜಿ ನಮೂನೆಯನ್ನು ಜಂಟಿ ನಿರ್ದೇಶಕರ ಕಚೇರಿ ಓ ಟಿ ರಸ್ತೆ ಶಿವಮೊಗ್ಗ ಇಲ್ಲಿಯ ಅರ್ಜಿಯನ್ನು ಪಡೆದು ನ.05 ರೊಳಗೆ ಸೀಲು ಮಾಡಿದ ಲಕೋಟೆಯಲ್ಲಿ ಮುದ್ದಾಂ/ನೋಅದಣಿ ಅಂಚೆ ಮೂಲಕ ಜಂಟಿ ಕೃಷಿ ನಿರ್ದೇಶಕರು ಶಿವಮೊಗ್ಗ ಇವರಿಗೆ ಸಲ್ಲಿಸಬಹುದೆಂದು ಕೃಷಿ ಜಂಟಿ ನಿರ್ದೇಶಕರು.

Related Post

Leave a Reply

Your email address will not be published. Required fields are marked *