ಹಾವೇರಿ: ಭಾರೀ ಮಳೆಯಿಂದಾಗಿ ನೀರಿನಲ್ಲಿ ಸಿಲುಕಿದ್ದ 30 ಭಕ್ತರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಹಾವೇರಿ ಜಿಲ್ಲೆಯ ಬರದೂರು ಗ್ರಾಮದ ಬಳಿ ಈ ಘಟನೆ ನಡೆದಿದೆ.
ಅಲ್ಲಾಪುರ ಹಾನಗಲ್ ತಾಲೂಕು ಗ್ರಾಮದ 30 ಮಂದಿ ಭಕ್ತರು ಪಂಡರಾಪುರ ಮಾರ್ಗವಾಗಿ ಭಾನುವಾರ ಸಂಜೆ ಬರದೂರು ಹೊರವಲಯದ ರಾಮಲಿಂಗ ಮಠದಲ್ಲಿ ತಂಗಿದ್ದರು. ರಾತ್ರಿ ಸುರಿದ ಭಾರೀ ಮಳೆಗೆ ಮಠಕ್ಕೆ ನೀರು ನುಗ್ಗಿ ಭಕ್ತರು ನೀರಲ್ಲಿ ಪರದಾಡಿದರು.
ಹಾವೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭಕ್ತರನ್ನು ರಕ್ಷಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಇರುವುದರಿಂದ ಗ್ರಾಮಸ್ಥರಿಗೆ ದಿಕ್ಕು ತೋಚದಂತಾಗಿದೆ.