ತುಮಕೂರು : ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮನೆಯೊಂದರ ಗೋಡೆ ಕುಸಿದು ಮಹಿಳೆಯೊಬ್ಬರು ಮಣ್ಣಿನಡಿ ಸಿಲುಕಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿ. ಹೊಸಹಳ್ಳಿ ನಿವಾಸಿ ಸಹನಾ (27) ಮೃತರು. ಬೆಳಗ್ಗೆ ಹಳೆಮನೆಯಲ್ಲಿ ಸ್ನಾನಕ್ಕೆಂದು ತೆರಳುತ್ತಿದ್ದಾಗ ಗೋಡೆ ಕುಸಿದು ಸಹನಾ ಕೆಸರಿನಲ್ಲಿ ಸಿಲುಕಿದ್ದರು. ಕೆಸರಿನಲ್ಲಿ ಸಿಲುಕಿದ್ದ ಸಹನಾಳನ್ನು ಗ್ರಾಮಸ್ಥರು ರಕ್ಷಿಸಿ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಜ್ಞಾಹೀನಳಾಗಿದ್ದಾಳೆ.
ಸಹನಾಳನ್ನು ಪರೀಕ್ಷಿಸಿದ ವೈದ್ಯರು ಸಹನಾ ಸಾವು ದೃಢಪಡಿಸಿದ್ದಾರೆ. ಈ ಸಂಬಂಧ ಗುಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.