ಚಿತ್ರದುರ್ಗ : ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆಯಿಂದ ಇಳುವರಿ ವೃದ್ಧಿ ಹಾಗೂ ಆರ್ಥಿಕಾಭಿವೃದ್ಧಿ ಸಾಧ್ಯ ಎಂದು ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಹೇಳಿದರು.
ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೋಮವಾರ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕಸಬಾ ಹೋಬಳಿ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ತುಂತುರು ಮತ್ತು ಹನಿ ನೀರಾವರಿ ಘಟಕಗಳ ಅಳವಡಿಕೆ ಮತ್ತು ನಿರ್ವಹಣೆ ಕುರಿತು ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಂತುರು ಮತ್ತು ಹನಿ ನೀರಾವರಿ ಪದ್ದತಿಗಳ ಅಳವಡಿಕೆಯಿಂದ ಕೃಷಿಯಲ್ಲಿ ಶೇ.30 ರಿಂದ 40 ನೀರಿನ ಉಳಿತಾಯ, ಸಮಯದ ಉಳಿತಾಯ, ಕಳೆಗಳ ನಿರ್ವಹಣೆ ಮತ್ತು ರೋಗಗಳ ಹರಡುವಿಕೆ ತಡೆಗಟ್ಟಬಹುದು. ನೀರು ಉಣಿಸಲು ಮತ್ತು ರಸಗೊಬ್ಬರ ಕೊಡಲು ಆಳುಗಳ ಕೊರತೆ ನೀಗಿಸಬಹುದು. ಇದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ಜೊತೆಗೆ ವ್ಯವಯಸಾಯದ ಖರ್ಚು ಕಡಿಮೆಯಾಗಿ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದರು.
ಕೃಷಿ ಇಲಾಖೆಯಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಶೇ 90 ಸಹಾಯಧನದಲ್ಲಿ ಸ್ಪ್ರಿಂಕ್ಲರ್ ಸೆಟ್ ಪಡೆಯಲು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಅನುಕೂಲ ಪಡೆದುಕೊಳ್ಳಬಹುದು. ಈ ಘಟಕಗಳನ್ನು ಕ್ಷೇತ್ರ ಮಟ್ಟದಲ್ಲಿ ಅಳವಡಿಸಲು ಮತ್ತು ಅವುಗಳ ನಿರ್ವಹಣೆಗೆ ಇಂದಿನ ತರಬೇತಿಯು ಸಹಕಾರಿಯಾಗಿದ್ದು, ತರಬೇತಿಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಬಬ್ಬೂರು ತೋಟಗಾರಿಕೆ ಇಂಜಿನಿಯರಿಂಗ್ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರ ಡಿ ಭಾರ್ಕೆರ್ ಅವರು ನೀರಿನ ಸಮರ್ಥ ಬಳಕೆ, ಹನಿ ನೀರಾವರಿ ಮತ್ತು ಸ್ಪ್ರೀಂಕ್ಲರ್ ಘಟಕಗಳ ಉಪಯೋಗ ಮತ್ತು ಅವುಗಳ ನಿರ್ವಹಣೆಯ ಕುರಿತು ವಿಷಯ ಮಂಡನೆ ಮಾಡಿದರು.
ವೆಂಕಟೇಶ್ವರಅಗ್ರಿ ಮತ್ತು ಹಾರ್ಟಿ ಸಲೂಷನ್ಸ್ ದಾವಣಗೆರೆ ಪ್ರತಿನಿಧಿಯಾದ ಅನಿಲ್ ಕುಮಾರ್ ಅವರು ಕ್ಷೇತ್ರ ಮಟ್ಟದಲ್ಲಿ ಸ್ಪ್ರಿಂಕ್ಲರ್‍ಸೆಟ್ ಘಟಕ ಅಳವಡಿಕೆ ವಿಧಾನ ಮತ್ತು ಅವುಗಳ ಸಮರ್ಪಕ ನಿರ್ವಹಣೆ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.
ನೀರಾವರಿ ತಜ್ಞರು ಮತ್ತು ಸಲಹೆಗಾರ ಬೇಸಾಯಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಜಿ.ಶಶಿಧರ ಅವರು ಸಾಲು ಕೃಷಿ ಬೆಳೆಗಳಲ್ಲಿ ಹನಿ ನೀರಾವರಿ ಪದ್ದತಿಯ ಕುರಿತು ವಿಷಯ ಮಂಡನೆ ಮಾಡಿ, ಈ ಪದ್ಧತಿಯಲ್ಲಿ ನೀರನ್ನು ಹನಿ ಹನಿಯಾಗಿ ಬೆಳೆಗಳ ಬೇರಿನ ವಲಯದಲ್ಲಿ ಒದಗಿಸಲಾಗವುದು. ನೀರಿನ ಕೊರತೆ ಇರುವ ಸಂದರ್ಭಗಳಲ್ಲಿ ಹಾಗೂ ಕ್ಷಾರಯುಕ್ತ ಜಮೀನುಗಳಲ್ಲಿ ಈ ಪದ್ಧತಿಯ ಅಳವಡಿಕೆ ಅತೀ ಉತ್ತಮ. ಇತರೆ ನೀರಾವರಿ ಪದ್ಧತಿಗಳಲ್ಲಿ ನೀರು ಬೇರಿನ ವಲಯಕ್ಕಿಂತ ಆಳವಾಗಿ ಇಂಗುವುದರಿಂದ ಹಾಗೂ ಆವಿಯಾಗಿ ಹೋಗುವುದರಿಂದ ಆಗುವ ನಷ್ಟವನ್ನು ಈ ಪದ್ಧತಿಯಿಂದ ಕಡಿಮೆಗೊಳಿಸಬಹುದೆಂದರು. ಈ ವಿಧಾನದಲ್ಲಿ ನೀರು ಜಿನುಗಿಸುವ ಸಾಧನಗಳನ್ನೊಳಗೊಂಡ ಕಡಿಮೆ ವ್ಯಾಸದ ಪ್ಲಾಸ್ಟ್ಟಿಕ್ ಕೊಳವೆಗಳನ್ನು ಉಪಯೋಗಿಸಿ ಬೆಳೆಗಳಿಗೆ ನೀರುಣಿಸಲಾಗುತ್ತದೆ. ಈ ವಿನ್ಯಾಸವನ್ನುತಾವು ನಿವೃತ್ತಿ ಹೊಂದುವ ಮೋದಲುಕಾರ್ಯನಿರ್ವಹಿಸುತ್ತದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೀರಾವರಿ ನೀರು ಸಂಶೋಧನಾ ಕೇಂದ್ರ, ಬೆಳವಟಗಿಯಲ್ಲಿ ಅಭಿವೃದ್ದಿಪಡಿಸಲಾಗಿದೆಂದರು. ಈ ವಿನ್ಯಾಸವು ಬಹುತೇಕಎಲ್ಲಾ ಕೃಷಿ ಬೆಳೆಗಳಿಗೆ ಅಳವಡಿಸಲು ಸೂಕ್ತವಾಗಿದೆ. ಅಲ್ಲದೇ ಈ ಹನಿ ನೀರಾವರಿ ಸಾಧನವನ್ನು ಭೂಮಿಯ ಮೇಲ್ಮನಲ್ಲಿಇರಿಸಲಾಗಿದ್ದು ಸುಲಭವಾಗಿತೆಗೆದುಜೋಡಿಸಬಹುದು. ಇದರಿಂದ ಬಿತ್ತುವುದುದರಿಂದಕಟಾವು ಮಾಡುವುದದವರೆಗಿನ ಎಲ್ಲಾ ಕೃಷಿ ಚಟುವಟಿಕೆಗಳನ್ನು ಎತ್ತಿನಿಂದಅಥವಾ ಟ್ರ್ಯಾಕ್ಟರ್‍ನಿಂದ ಮಾಡಲು ಸೂಕ್ತವಾಗಿದೆ. ಈ ಹೊಸ ವಿನ್ಯಾಸವನ್ನು “ಧಾರವಾಡ ಕೃಷಿ ವಿಶ್ವವಿದ್ಯಾಲಯ ಮಾದರಿ” ಎಂದೇ ಹೆಸರಿಸಲಾಗಿದೆಂದರು.
ಸಾಲು ಕೃಷಿ ಬೆಳೆಗಳಲ್ಲಿ ಹನಿ ನೀರಾವರಿ ಪದ್ಧತಿಯನ್ನುಪ್ರಮುಖಮುಂಗಾರು ಬೆಳೆಗಳಾದ ಗೋವಿನಜೋಳ, ರ್ಸೂಕಾಂತಿ, ಶೇಂಗಾ, ತೊಗರಿ, ಈರುಳ್ಳಿ, ಮೆಣಸಿನಕಾಯಿ ಹೆಸರು ಬೆಳೆಗಳಲ್ಲಿನ ಮತ್ತು ಹಿಂಗಾರಿನಲ್ಲಿ ಗೋದಿ, ಕಡಲೆ, ಮತ್ತುಅವರೆ ಬೆಳೆಗಳಲ್ಲಿ ಸೂಕ್ತವಾಗಿ ಅಳವಡಿಸಿಕೊಳ್ಳಬಹುದೆಂದರು.
ಈ ಪದ್ಧತಿಯಲ್ಲಿ ಶೇ. 40 ರಷ್ಟು ನೀರನ್ನು ಉಳಿತಾಯ ಮಾಡುವುದಲ್ಲದೇ ಶೇ. 20-30 ರಷ್ಟು ಹೆಚ್ಚಿಗೆ ಇಳುವರಿಯನ್ನು ಪಡೆಯಬಹುದು. ಈ ಬೆಳೆಗಳಿಗೆ ಡ್ರಿಪರ್‍ನಲ್ಲಿ (ಇನ್ ಲೈನ್ ಡ್ರಿಪರ್-ಒಳ ಸೇರಿರುವ ಹನಿ ಸಾಧಕ) ನೀರು ಹರಿಯುವ ಪ್ರಮಾಣ 4 ಲೀ ಘಂಟೆಗೆ, ಎರಡು ಡ್ರಿಪರ್‍ಗಳ ನಡುವಿನ ಅಂತರ 40 ಸೆಂ.ಮೀ. ಹಾಗೂ ಎರಡು ಲ್ಯಾಟ್ರಲ್ ನಡುವಿನ ಅಂತರ 60 ಸೆಂ.ಮೀ. ನಂತೆ ಜೋಡಿಸಿ ಬೆಳೆಯಬಹುದು. ಮುಂಗಾರು ಬೆಳೆಗಳಿಗೆ ನೀರನ್ನು ಪ್ರತಿ ನಾಲ್ಕು ದಿನಗಳಿಗೊಮ್ಮೆ ಮತ್ತು ಹಿಂಗಾರು ಬೆಳೆಗಳಿಗೆ ಪ್ರತಿ ಏಳು ದಿನಗಳಿಗೊಮ್ಮೆ ನೀರು ಆವಿಯಾಗುವಒಟ್ಟು ಪ್ರಮಾಣಕ್ಕನುಸಾರವಾಗಿ ಹನಿ ನೀರಾವರಿಯಲ್ಲಿ ನೀರು ಕೊಡಬೇಕೆಂದರು.
ತರಬೇತಿಯಲ್ಲಿ ಮೊಳಕಾಲ್ಮೂರು ತಾಲ್ಲೂಕಿನ ಆಸಕ್ತ 60 ಜನ ರೈತಬಾಂಧವರು ಭಾಗವಹಿಸಿದ್ದರು.