ಹಾಸನ ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಈ ಮೂಲಕ ತಿಳಿಯಡಿಸುವುದೇನೆಂದರೆ, ಶೇ.29, ಶೇ.7.25 ಮತ್ತು ಶೇ.5ರ 2024-25ನೇ ಸಾಲಿನ ನಗರಸಭಾ ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಾರ್ಯಕ್ರಮಕ್ಕಾಗಿ ಹಾಗೂ ವಿಶೇಷ ಚೇತನ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನ.8 ಸಂಜೆ 5 ಗಂಟೆಯೊಳಗೆ ಈ ಕಚೇರಿಗೆ ಕೆಳಕಂಡ ಕಾರ್ಯಕ್ರಮಗಳಿಗೆ ಸೌಲಭ್ಯ ಪಡೆಯಲು ಅಗತ್ಯ ದಾಖಲಾತಿಗಳ ಸಹಿತ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಕಡೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಕಛೇರಿ ವೇಳೆಯಲ್ಲಿ ಈ ಕೆಳಕಂಡ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಸಲ್ಲಿಸುವುದು. ಹೆಚ್ಚಿನ ವಿವರಕ್ಕಾಗಿ ಸಂಬAದಪಟ್ಟ ವಿಷಯ ನಿರ್ವಾಹಕರಿಂದ ಕಚೇರಿಯ ವೇಳೆಯಲ್ಲಿ ಮಾಹಿತಿಯನ್ನು ಪಡೆಯಬಹುದು.
ಶೇ.29 ರ 2024-25ನೇ ಸಾಲಿನ ನಗರಸಭಾ ನಿಧಿ: ಸಣ್ಣ ಉದ್ದಿಮೆ ಪ್ರಾರಂಬಿಸಲು ಯೋಜನಾ ವೆಚ್ಚದ ಶೇ.50 ರಷ್ಟು ಅಥವಾ ರೂ.1.50 ಲಕ್ಷಗಳಿಗೆ ಯಾವುದು ಕಡಿಮೆಯೋ ಅಷ್ಟು ಸಹಾಯ ಧನ ನೀಡುವುದು.
ಇತರೆ ಹಿಂದುಳಿದ ವರ್ಗಗಳ ವೈಯಕ್ತಿಕ ಕಾರ್ಯಕ್ರಮ ಶೇ.7.25: ಇತರೆ ಬಡ ಜನ ಎಸ್.ಎಸ್.ಎಲ್.ಸಿ. ಮೇಲ್ಪಟ್ಟು ವಿವಿದ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದು.
ಶೇ.5% 2024-25ನೇ ಸಾಲಿನ ನಗರಸಭಾ ನಿಧಿ: ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಒದಗಿಸುವುದು ಎಂದು ಹಾಸನ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ
.