Breaking
Tue. Dec 24th, 2024

ಉತ್ತಮ ಗುಣಮಟ್ಟದ ಮೇವುನ್ನು ಜಾನುವಾರುಗಳಿಗೆ ನೀಡಿ ರೈತರು ಅಧಿಕ ಲಾಭ ಗಳಿಸಲು ಸಾಧ್ಯ : ಪ್ರೋ ಕೆ. ಸಿ ವೀರಣ್ಣ….!

ಬೆಂಗಳೂರು ನಗರ ಜಿಲ್ಲೆ : ಉತ್ತಮ ಗುಣಮಟ್ಟದ ಮೇವುಗಳನ್ನು ಜಾನುವಾರುಗಳಿಗೆ ನೀಡುವುದರಿಂದ ಹಾಲು ಉತ್ಪಾದನೆಯಾಗಲಿದೆ,ಇದರಿಂದ ರೈತರ ಆದಾಯವೂ ಅಧಿಕ ಬೆಳೆ ಎಂದು ಬೀದರ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಗೌರವಾನ್ವಿತ ಕುಪಪತಿಗಳಾದ ಪ್ರೊ.ಕೆ.ಸಿ.ವೀರಣ್ಣ ಅವರು ರೈತರಿಗೆ ತಿಳಿದಿದ್ದಾರೆ.

ಇಂದು ನಗರದ ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಕಾಲೇಜು, ಬಾಲಕರ ಹಾಸ್ಟೆಲ್ ಮೈದಾನದಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್. ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ ಮತ್ತು ಭಾರತೀಯ ಡೈರಿ ಅಸೋಸಿಯೇಷನ್-ದಕ್ಷಿಣ ವಲಯ ಸಂಯುಕ್ತಾಶ್ರಯದಲ್ಲಿ ಇವರು ಆಯೋಜಿಸಿದ್ದ “ಮೇವು ಮೇಳ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ. ರೈತರು ವಿವಿಧ ಮೇವಿನ ಬೆಳೆಗಳನ್ನು ಬೆಳೆದು ಜಾನುವಾರುಗಳಿಗೆ ಪೋಷಕಾಂಶದ ಮೇವನ್ನು ನೀಡಿದ್ದಾರೆ. ಒಣ ಮೇವುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಪ್ರೋಟಿನ್ ಯುಕ್ತ ಮೇವಿನ ಬೆಳೆಗಳ ಮಾಹಿತಿ ಮತ್ತು ಬೀಜಗಳು ಲಭ್ಯವಿದ್ದು ಇದನ್ನು ಎಲ್ಲಾ ರೈತ ವರ್ಗದವರು ಸದುಪಯೋಗ ಪಡಿಸಿಕೊಳ್ಳುತ್ತಾರೆ ರೈತರಿಗೆ ಸಲಹೆ ಸೂಚನೆ.

ಬಹಳಷ್ಟು ರೈತರು ಮಾವಿನ ತೋಟ, ಚಿಕ್ಕು ತೋಟ, ತೆಂಗಿನ ತೋಟ, ಹೊಂದಿರುತ್ತಾರೆ, ಗಿಡಗಳು ದೊಡ್ಡದಾದ ಮೇಲೆ ಗಿಡಗಳ ಮಧ್ಯದ ಪ್ರದೇಶವನ್ನು ಬಳಸುವುದಿಲ್ಲ ಇಂತಹ ಪ್ರದೇಶದಲ್ಲಿ ಮೇವಿನ ಬೆಳೆ ಬೆಳೆಯುವುದರಿಂದ ಹೈನುಗಾರಿಕೆಯ ಖರ್ಚನ್ನು ಕಡಿಮೆ ಮಾಡಿ ಜಾನುವಾರುಗಳಿಗೆ ಹೆಚ್ಚಿನ ಲಾಭವನ್ನು ಮಾಡಿ, ಅಧಿಕ ತೋಟವನ್ನು ಪಡೆಯಬಹುದು ಎಂದು ಅವರು ಪ್ರಕಟಿಸಿದರು.

ಮೇಳದಲ್ಲಿ ಹೆಚ್ಚಿನ ಖನಿಜಾಂಶ ಇರುವ, ಬೇಸಿಗೆ–ಮಳೆಗಾಲದ ಎರಡು ಋತುಗಳಲ್ಲಿ ಹಸಿರು ಮೇವು ನೀಡುವ ‘ಮೇವಿನ ಸಜ್ಜೆ’, ನೆಲ–ಹೊಲದ ಅಗತ್ಯವೇ ಇಲ್ಲದಂತೆ ಮನೆ ಮಹಡಿಯಲ್ಲಿಯೂ ಬೆಳೆಯಬಹುದಾದ ಜಲಕೃಷಿ ಮೇವಿನ ಬೆಳೆ, ಹಲವು ಬಾರಿ ಕಟಾವ್ ಮಾಡಬಹುದಾದ ಹೈಬ್ರಿಡ್ ನೇಪಿಯರ್ ಹುಲ್ಲು, ರೇಷ್ಮೆಗೂ ಮೇವಿಗೂ ಬಳಸಬಹುದಾದ ಹಿಪ್ಪು ನೇರಳೆ (ಮಲ್ಬೆರಿ), ನೇಪಿಯರ್ ಮತ್ತು ಜೋಳವನ್ನು ಕಸಿ ಮಾಡಿದ ಪುಲೆ ಜೈವಂತ್ ಹುಲ್ಲುಗಳು ಗಮನ ಸೆಳೆದವು.  

ಮೇವು ಸಹಿತ ಕೃಷಿಗೆ ಬಳಸುವ ಅಡಿಕೆ ಹಾಳೆ ಗೊಬ್ಬರ, ಹಲಸಿನ ಹಣ್ಣಿನ ಗೊಬ್ಬರ, ಎರೆಹುಳು ಗೊಬ್ಬರ ಸಹಿತ ವಿವಿಧ ತರಹದ ಗೊಬ್ಬರಗಳನ್ನು ಪ್ರದರ್ಶಿಸಲಾಯಿತು.

ಪಾಚಿ ರೀತಿಯಲ್ಲಿ ಬೆಳೆಯುವ ಅಜೋಲ, ಏಕ ಕಟಾವ್ ದ್ವಿದಳ ಮೇವಿನ ಬೆಳೆಗಳಾದ ಗೋವಿನ ಜೋಳ, ಮೇವಿನ ಜೋಳ, ಮೇವಿನ ಅಲಸಂದಿ, ಹುರುಳಿ, ಸೋಯಾ ಅವರೆ, ಬಹುಕಟಾವು/ ಬಹು ವಾರ್ಷಿಕ ದ್ವಿದಳ ಮೇವಿನ ಬೆಳೆಗಳಾದ ಕುದುರೆ ಮಸಾಲೆ, ದಶರಥ ಹುಲ್ಲು, ಬೇಲಿ ಮೆಂತೆ, ನೇಪಿಯರ್ ಹುಲ್ಲು, ಈಳುವರಿ ನೀಡುವ ಹುಲ್ಲು ಗಿರಿಮೇವು, ಗಿಣಿ , ರೋಡ್ಸ್ ಹುಲ್ಲು, ಬ್ರೇಕೇರಿಯ ಹುಲ್ಲು, ಕುದುರೆಮೆಂತೆ, ಸ್ಟೈಲೋ, ಸೂಪರ್ ನೇಪಿಯರ್, ಪ್ಯಾರಾ ಹುಲ್ಲು, ಬರ್ಸಿಮ, ಲೂಸರ್ನ್, ಚವಳಿ, ಮರ ಹುಲ್ಲುಗಳಾದ ಸುಬಾಬುಲ್, ಚೋಗಚಿಗಳು ಪ್ರದರ್ಶನಗೊಂಡವು.

ಈ ಮೇವು ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ನಿರ್ದೇಶಕರಾದ ಡಾ. ಮಂಜುನಾಥ್ ಎಸ್ ಪಾಳೇಗಾರ್, ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ .ಎನ್ ಕೆ ಎಸ್ ಗೌಡ, ಕರ್ನಾಟಕ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಪದ್ಮ ಪ್ರಕಾಶ್, ಕಪಮೀವಿಯ ವ್ಯವಸ್ಥಾಪಕ ಮಂಡಳಿ ಸದಸ್ಯರು, ಸೇರಿದಂತೆ ಇತರೆ ಅಧಿಕಾರಿಗಳು, ರೈತಾಪಿ ವರ್ಗದವರು, ಸಾರ್ವಜನಿಕರು.

 

 

Related Post

Leave a Reply

Your email address will not be published. Required fields are marked *