Breaking
Tue. Dec 24th, 2024

ಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ….!

ಶಿವಮೊಗ್ಗ ಡಿ.ಎ.ಆರ್. ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಸಮುದಾಯ ಭವನದ ಉದ್ಘಾಟನೆಯನ್ನು ಶನಿವಾರದಂದು ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ನೆರವೇರಿಸಿದರು.

 ಡಿ.ಎ.ಆರ್ 3.75 ಕೋಟಿ ವೆಚ್ಚದಲ್ಲಿ ನಿರ್ಮಾಣ ಕೇಂದ್ರದ ವತಿಯಿಂದ ನೂತನವಾಗಿ ಪೊಲೀಸ್ ಸಮುದಾಯ ಭವನ ನಿರ್ಮಿಸಲಾಗಿದೆ. 500 ಸೀಟಿಂಗ್ ಸಾಮರ್ಥ್ಯ, ಊಟದ ಹಾಲ್ ಸೇರಿದಂತೆ ಸುಸಜ್ಜಿತವಾಗಿ ಭವನವನ್ನು ನಿರ್ಮಿಸಲಾಗಿದೆ.

 ನಂತರ ಡಿಇಆರ್ ಸಭಾಂಗಣದಲ್ಲಿ ಗೃಹ ಸಚಿವರು ಪೂರ್ವ ವಯಲದ ಉಪ ಪೊಲೀಸ್ ಮಹಾನಿರೀಕ್ಷಕರಾದ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವಿಮರ್ಶನಾ ಸಭೆಯನ್ನು ನಡೆಸಿದ್ದಾರೆ.

 ಡಿಎಆರ್ ಪೊಲೀಸ್ ಭವನದ ಉದ್ಘಾಟನೆ ವೇಳೆ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಬಿ.ಕೆ ಸಂಗಮೇಶ್ವರ್, ಗೋಪಾಲ ಕೃಷ್ಣ ಬೇಳೂರು, ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಂಜುನಾಥ ಭಂಡಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು .

Related Post

Leave a Reply

Your email address will not be published. Required fields are marked *