ಚಿತ್ರದುರ್ಗ : ಹಿರಿಯೂರು ತಾಲ್ಲೂಕಿನ ಉಡುವಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ 2025-26ನೇ ಸಾಲಿಗೆ 9 ಮತ್ತು 11 ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಆಡಳಿತಾತ್ಮಕ ಕಾರಣಗಳಿಂದ ನ.9 ರವರೆಗೆ ವಿಸ್ತರಿಸಲಾಗಿದೆ.
9ನೇ ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು 8 ತರಗತಿಯಲ್ಲಿ ಓದುತ್ತಿದ್ದಾರೆ, 2010 ಮೇ 01 ರಿಂದ 2012 ಜುಲೈ 31 ರಂದು ಜನಿಸಿರಬೇಕು. 11 ತರಗತಿಯ ಪ್ರವೇಶ ಬಯಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಓದುತ್ತಿದ್ದಾರೆ, 2008 ಜೂನ್ 1 ರಿಂದ 2010 ರ ಜುಲೈ 31 ರ ನಡುವೆ ಜನಿಸಿರಬೇಕು. ಅಭ್ಯರ್ಥಿಗಳು ಜಿಲ್ಲೆಯ ಖಾಯಂ ನಿವಾಸಿಗಳಿಗೆ.
ವೆಬ್‌ಸೈಟ್ https://cbsietms.nic.in/2024/nvsix/restrationclassIX/registrationclassIX ಹಾಗೂ https://cbsietms.nic.in/2024/nvsix/restrationclassXI/registrationclassXI ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆ ಪರೀಕ್ಷೆಯ ವಸ್ತು, ಕೇಂದ್ರಗಳಿಗೆ ನವೋದಯ ವಿದ್ಯಾಲಯ ಸಮಿತಿಯನ್ನು ವೀಕ್ಷಿಸುವಂತೆ ಪ್ರಾಚಾರ್ಯ ಡೇನಿಯಲ್ ರತನ್ ಕುಮಾರ್ ಆಯ್ಕೆ.