ಚಿತ್ರದುರ್ಗ : ಆರ್ಮಿ ವೇಲ್ಫೇರ್ ಪ್ಲೇಸ್‌ಮೆಂಟ್ (AWPO) ಮತ್ತು ದಿ ಮಾವೆನ್ ಕೊಹಾರ್ಟ್ (ದಿ ಮಾವೆನ್ ಕೋಹಾರ್ಟ್) ಎಂಬ ಸಂಸ್ಥೆಯು ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಜೆ.ಸಿ.ಓ (JCO) ರ್ಯಾಂಕ್ ಕಳೆದ ವರ್ಷ ನಿವೃತ್ತಿ ಹೊಂದಿರುವ ಸೈನಿಕರು ಹಾಗೂ ಮಾಜಿ ಸೈನಿಕರ ಕೇಂದ್ರ ಸರ್ಕಾರಿ ಉದ್ಯೋಗ ಮತ್ತು ಬ್ಯಾಂಕ್ ನೇಮಕಾತಿಗಾಗಿ ಪಾವತಿ ಪೂರ್ವ ತಯಾರಿ ಆನ್‌ಲೈನ್ ತರಬೇತಿಗಳನ್ನು ಪರಿಚಯಿಸುತ್ತಿದೆ. ನವೆಂಬರ್ 6 ರಿಂದ ತರಬೇತಿ ಪ್ರಾರಂಭವಾಗಲಿದೆ,ಆಸಕ್ತರು AWPO ವೆಬ್‌ಸೈಟ್ https://me-qr.com/ZloLV2HS ನಲ್ಲಿ ನೊಂದಾಯಿಸಿದ ನಂತರ ತರಬೇತಿಯ ಸುವರ್ಣಾವಕಾಶವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಆರ್ಮಿ ವೆಲ್ಫೇರ್ ಪ್ಲೇಸ್ಮೆಂಟ್ ಆರ್ಗನೈಜೇಷನ್ AWPO ನ ಜಾಲತಾಣವನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಆರ್.ಸಿ.ಹಿರೇಮಠ.