ಶಿವಮೊಗ್ಗ : ಭದ್ರಾವತಿ ವಜ್ರಮಹೋತ್ಸವದ ವರ್ಷಾಚರಣೆ ಹಾಗು ರಾಜ್ಯೋತ್ಸವ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ನವೆಂಬರ್ 1 ರಂದು ಬೆಳಿಗ್ಗೆ 10.00 ಗಂಟೆಯಿAದ 11.30ರವರೆಗೆ ವಿಶೇಷ ಕಾರ್ಯಕ್ರಮ ಕವನ ವಾಚನ ಮತ್ತು ಗಾಯನ ಪ್ರಸಾರವಾಗಲಿದ್ದು, ಶಿವಮೊಗ್ಗ ಜಿಲ್ಲೆಯ ಆಯ್ದ ಕವಿಗಳು ಕವನ ವಾಚನ ಮಾಡಲಿದ್ದು ಅವರು ವಾಚಿಸಿದ ಕವನಕ್ಕೆ ರಾಗ ಸಂಯೋಜಿಸಿ ಹಾಡುವ ವಿನೂತನ ಕಾರ್ಯಕ್ರಮ ಇದಾಗಿದೆ.
ಹಾಗೂ ನವೆಂಬರ್ ತಿಂಗಳ ಪೂರ್ತಿ ‘ಹೊರದೇಶದಲ್ಲಿ ಕನ್ನಡ ಡಿಂಡಿಮ’ ಎನ್ನುವ ವಿಶೇಷ ಸರಣಿಯು ಪ್ರಸಾರಿಸುತ್ತಿದೆ. ಕನ್ನಡ ನಾಡು-ನುಡಿಯನ್ನು ಹೊರನಾಡಿನಲ್ಲಿ ಕಟ್ಟಿ ಬೆಳೆಸಿ ಕನ್ನಡ ಕಂಪನ್ನು ಹೊರದೇಶದಲ್ಲಿ ಬೆಳೆಸುತ್ತಿರುವ ಕನ್ನಡಿಗರ ಯಶೋಗಾಥೆಯನ್ನು ಹೊರನಾಡ ಸಾಧಕರೆ ತಿಳಿಸುವ ಈ ಕಾರ್ಯಕ್ರಮ ಸರಣಿ ಪ್ರತಿ ದಿನ ಬೆಳಿಗ್ಗೆ 9.45ಕ್ಕೆ ಪ್ರಸಾರವಾಗಲಿದೆ ಎಂದು ಭದ್ರಾವತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮವನ್ನು FM 103.5 ಹಾಗೂ MW 675 khz ನಲ್ಲಿ ಕೇಳುವುದರೊಟ್ಟಿಗೆ ಜಗತ್ತಿನಾದ್ಯಂತAkashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಕೇಳಬಹುದು.