ಬಳ್ಳಾರಿ : ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾಲಯದ ಆಡಳಿತಾಂಗದ ಕುಲಸಚಿವ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ಕನ್ನಡ ಭಾಷೆ ಹಾಗೂ ಕನ್ನಡ ನಾಡು ಬೆಳೆಸುವ ಅಭಿಮಾನಿಗಳಾಗಬೇಕು. ಕನ್ನಡತನವನ್ನು ಬೆಳೆಸಬೇಕಾದರೆ ವೈಚಾರಿಕ ಮತ್ತು ವೈಜ್ಞಾನಿಕ ಲೇಪನದೊಂದಿಗೆ ಬಳಸಿದಾಗ ಕನ್ನಡವು ತಾನೇತಾನಾಗಿ ಬೆಳೆಯುತ್ತದೆ ಎಂಬುದಾಗಿ ಕರೆ ನೀಡಿದರು.
ವಿವಿಯ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ರಂಗನಾಥ್ ಅರನಕಟ್ಟೆ ಅವರು ಮಾತನಾಡಿ, ವಿವಿಯ ಆಡಳಿತ ವಿಭಾಗಗಳಲ್ಲಿ ಸಂವಹನವಾಗಿ ಕನ್ನಡವನ್ನು ವಿಸ್ತರಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಪ್ರೊ.ಭೀಮನಗೌಡರು ಮಾತನಾಡಿ, ಕನ್ನಡ ಭಾಷೆ ಹಾಗೂ ವ್ಯವಹಾರದಲ್ಲಿ ಸ್ಥಳೀಯ ಪದಗಳನ್ನೇ ಬಳಸಿಕೊಂಡು ಕನ್ನಡಿಗರು ವಿಶಾಲ ಹೃದಯವಂತರಾಗಬೇಕು ಎಂದರು.
ಪೊ.ಶಾAತನಾಯ್ಕ ಮಾತನಾಡಿ, ಕನ್ನಡ ಭಾಷೆಯನ್ನು ಸಾಮಾಜಿಕವಾಗಿ ಒಪ್ಪಿಕೊಂಡು ಅಪ್ಪಿಕೊಂಡಾಗ ಕನ್ನಡ ಭಾಷೆ ಉಳಿಯುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.
ಅಣ್ಣಾಜಿ ಕೃಷ್ಣಾರೆಡ್ಡಿ ಸಂಗಡಿಗರು ಕನ್ನಡ ಗೀತೆಗಳನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದರು.
ಕಾರ್ಯಕ್ರಮದಲ್ಲಿ ಪೊ.ಹೆಚ್.ತಿಪ್ಪೇರುದ್ರಪ್ಪ ಸೇರಿದಂತೆ ವಿವಿಧ ವಿಭಾಗಗಳ ಡೀನರು ಹಾಗೂ ಪ್ರಾಧ್ಯಾಪಕರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.