ರಾಯಚೂರು : ಪಟಾಕಿ ಅಂಗಡಿಗೆ ಬೆಂಕಿ ಹಚ್ಚಿ ಒಳಗಿದ್ದ ವಸ್ತುಗಳು ಸುಟ್ಟು ಕರಕಲಾದ ಘಟನೆ ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆ ಬಳಿ ನಡೆದಿದೆ.
ರಾಯಚೂರಿನ ಎಂ.ಜಿ.ರಸ್ತೆ ಬಳಿಯ ಬಟ್ಟೆ ಅಂಗಡಿಯಲ್ಲಿ ಪಟಾಕಿ ಸಿಡಿದು ಸುಟ್ಟು ಕರಕಲಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಘಟನೆ ನಡೆದಾಗ ಅದೇ ಮಾರ್ಗವಾಗಿ ಭುವನೇಶ್ವರಿ ತಾಯಿಯ ಮೆರವಣಿಗೆ ಸಾಗುತ್ತಿತ್ತು. ಅಗ್ನಿ ಅವಘಡದಿಂದ ಕನ್ನಡಾಂಬೆ ಮೆರವಣಿಗೆಗೆ ಅಡ್ಡಿಯಾಯಿತು. ಬೆಂಕಿಯಿಂದಾಗಿ ಕನ್ನಡಾಂಬೆಯ ಮೆರವಣಿಗೆ ಕೆಲಕಾಲ ಸ್ಥಗಿತಗೊಂಡಿತ್ತು.