ಬೆಂಗಳೂರಿನ ಜಯನಗರದಲ್ಲಿರುವ ರಾಘವೇಂದ್ರ ಸ್ವಾಮಿಗಳ ನಂಜನಗೂಡು ಮಠಕ್ಕೆ ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ದಂಪತಿ ಭೇಟಿ ನೀಡಿ ರಾಯರ ದರ್ಶನ ಪಡೆದರು.
ಬೆಂಗಳೂರು : ಬೆಂಗಳೂರಿನ ಜಯನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭೇಟಿ ನೀಡಿ ರಾಯರ ದರ್ಶನ ಪಡೆದರು. ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ.
ಇಂದು ಸಂಜೆ (ನ.5) 6:00 ಗಂಟೆ ಸುಮಾರಿಗೆ ಮಠಕ್ಕೆ ಆಗಮಿಸಿದ ಋಷಿ ಸುನಕ್ ದಂಪತಿ ಹಾಗೂ ನಾರಾಯಣ ಮೂರ್ತಿ ದಂಪತಿಗಳು ಸುಮಾರು ಅರ್ಧಗಂಟೆಗಳ ಕಾಲ ಮಠದಲ್ಲಿ ತಂಗಿದ್ದು, ಏಕಕಾಲಕ್ಕೆ ಮಂಗಳಾರತಿ, ತೀರ್ಥ, ರಾಯರ ಮಂತ್ರಾಕ್ಷತೆ ಸ್ವೀಕರಿಸಿದರು. ಕಾರ್ತಿಕ ಮಾಸ, ಅವರು ಸ್ವರ್ಗದ ದೀಪಗಳ ಉಪಸ್ಥಿತಿಯಲ್ಲಿ ಬೆಳಗುತ್ತಾರೆ.