ಚಿತ್ರದುರ್ಗ : ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ 2024-25ನೇ ಸಾಲಿಗೆ ಚಿತ್ರದುರ್ಗ ನಗರಸಭೆ ನಿಧಿಯಡಿ ಕ್ರೀಯಾ ಯೋಜನೆ ರೂಪಿಸಿ ಪ್ರೋತ್ಸಾಹ ಹಾಗೂ ಸಹಾಯಕ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2024ರ ಡಿಸೆಂಬರ್ 07 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ನಗರಸಭೆಯ ನಿಧಿಯ ಶೇಕಡ 24.10 ಮತ್ತು 7.25 ಕ್ರಿಯಾ ಯೋಜನಡೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ, ಎಸ್.ಎಸ್.ಎಲ್.ಸಿ ಇಂದ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಶೇ.5ರ ಕ್ರೀಯಾ ಯೋಜನೆಯಡಿ ಅಂಗವಿಕಲರು, ಪೊಲೀಯೊಗೆ ತುತ್ತಾದವರಿಗೆ ಕೃತಕ ಪಾದ ಮತ್ತು ಇತರೆ ಅಂಗಾಗಗಳ ಜೋಡಣೆಗೆ ತಗಲುವ ಮೊತ್ತಕ್ಕೆ ಸಹಾಯಧನ ನೀಡಲಾಗುವುದು.
ಅರ್ಜಿ ನಮೂನೆ ಮತ್ತು ಬಾಕಿ ಉಳಿದಿರುವ ಅನುದಾನ ವಿವಿಧ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಚೇರಿಯ ವಿಷಯ ನಿರ್ವಾಹಕರು ಅಥವಾ ವೆಬ್ ಸೈಟ್ www.chitradurgacity.mrc.gov.in ಭೇಟಿ ನೀಡಬಹುದು.
ಚಿತ್ರದುರ್ಗ ನಗರ ವ್ಯಾಪ್ತಿಯ ಸಾರ್ವಜನಿಕರು ನಿಗಧಿತ ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಕಡೆಯ ದಿನದ ಒಳಗಾಗಿ ಸಲ್ಲಿಸುವಂತೆ ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.