ಬಳ್ಳಾರಿ ಮತ್ತು ಕುರುಗೋಡು ತಾಲ್ಲೂಕಿನ ವಿದ್ಯುತ್ ಗ್ರಾಹಕರು ಗೃಹಜ್ಯೋತಿ ಯೋಜನೆಯಲ್ಲಿ ನೋಂದಾಯಿಸಲು ಇದ್ದಲ್ಲಿ ಹತ್ತಿರದ ಜೆಸ್ಕಾಂ ಕಚೇರಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು ಎಂದು ಜೆಸ್ಕಾ ಗ್ರಾಮೀಣ ಬಳ್ಳಾರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್‌ಬಾಬು ಅವರು ಸೂಚಿಸಿದರು.
ರಾಜ್ಯ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಉಚಿತ ವಿದ್ಯುತ್ ಕಾರ್ಯಕ್ರಮ ಯೋಜನೆ ಜಾರಿಯಲ್ಲಿದ್ದು, ವಿದ್ಯುತ್ ಗ್ರಾಹಕರು ಯೋಜನೆ ಸದುಪಯೋಗವನ್ನು ಹೊಂದಿದೆ.
ನೋಆದಾನಿಯಾಗದೇ ಇರುವ ವಿದ್ಯುತ್ ಗ್ರಾಹಕರು ಜೆಸ್ಕಾಂ ಸಿಬ್ಬಂದಿಯಾದ ಜಿವಿಪಿ, ಮೀಟರ್ ರೀಡರ್, ಶಾಖಾಧಿಕಾರಿಗಳು ಅಥವಾ ಜೆಸ್ಕಾಂ ಬಳ್ಳಾರಿ ಗ್ರಾಮೀಣ ಉಪ-ವಿಭಾಗ ಕಚೇರಿ ಅಥವಾ ಜೆಸ್ಕಾಂ ಕುರುಗೋಡು ಉಪ-ವಿಭಾಗದ ಕಚೇರಿಗಳಿಗೆ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.