ಚಿತ್ರದುರ್ಗ : ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಹಿರಿಯೂರು ತಾಲ್ಲೂಕು ಧರ್ಮಪುರ ಹೋಬಳಿಯ ಧರ್ಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಹಾಯಕ ವಿಜಯೇಂದ್ರ ಅವರನ್ನು ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಅವರು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.
ತಾಂತ್ರಿಕ ಸಹಾಯಕ ವಿಜಯೇಂದ್ರ ಅವರು, ನರೇಗಾ ಯೋಜನೆಯ ಕಾಮಗಾರಿಗಳ ಸಾಮಗ್ರಿ ಬಿಲ್ಲುಗಳ ಎಂಐಎಸ್ ಮಾಡಿ ಎಫ್‍ಟಿಒಗಳನ್ನು ಸೃಜಿಸಿದ್ದು, ಈ 33 ಕಾಮಗಾರಿಗಳ ಎಂ.ಬಿಯನ್ನು ದಾಖಲಿಸದೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಹಿರಿಯೂರು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವರದಿ ನೀಡಿರುತ್ತಾರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೊಬೈಲ್ ರೆಕಾರ್ಡ್ ಕ್ಲಿಪ್‍ನಲ್ಲಿ ಸಾರ್ವಜನಿಕರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೂ.3 ಲಕ್ಷದ ಕಾಮಗಾರಿ ಅನುಷ್ಠಾನಗೊಳಿಸುವಲ್ಲಿ ಶೇ.4 ನಂತೆ ರೂ.12,000/-ಗಳಿಗೆ ಹಣದ ಬೇಡಿಕೆ ಇಟ್ಟಿರುತ್ತಾರೆ.
ಹೀಗೆ ಹಣದ ಬೇಡಿಕೆಯನ್ನು ಇಟ್ಟು ನರೇಗಾ ಯೋಜನೆಯ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿರುತ್ತಾರೆ. ಆದ್ದರಿಂದ ಇವರ ಸೇವೆಯು ಇಲಾಖೆಗೆ ಅವಶ್ಯಕತೆ ಇಲ್ಲದೇ ಇರುವುದರಿಂದ ವಿಜಯೇಂದ್ರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ