ಚಿತ್ರದುರ್ಗ : ನೇಕಾರರ ವಿಶೇಷ ಯೋಜನೆ ಯೋಜನೆ ವಿಶೇಷ ಘಟಕ, ಗಿರಿಜನ ಉಪ ಯೋಜನೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಜವಳಿ ಕ್ಷೇತ್ರಕ್ಕೆ ಸಂಬಧಿಸಿದ ಸಣ್ಣ ಮತ್ತು ಸಣ್ಣ (ಎಸ್.ಎಂ.ಐ) ಘಟಕಗಳ ಸ್ಥಾಪನೆಗೆ ಶೇ.75ರಷ್ಟು ಸಹಾಯಧನ, ಗರಿಷ್ಠ ರೂ.2.00ಕೋಟಿವರೆಗೆ ಸಹಾಯಧನ ನೀಡುವ ಯೋಜನೆ 2024- 25ನೇ ಸಾಲಿಗೆ ವಿಶೇಷ ಘಟಕ ಯೋಜನೆ 3 ಮತ್ತು ಗಿರಿಜನ ಉಪ ಯೋಜನೆ 2 ಸೇರಿದಂತೆ ಒಟ್ಟು 5 ಎಸ್.ಎಂ.ಇ ಘಟಕಗಳನ್ನು ಸ್ಥಾಪಿಸಲು ನಿಗದಿಪಡಿಸಲಾಗಿದೆ.
ಸ್ಥಾಪಿಸಲು ಆಸಕ್ತಿ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕಗಳಿಗೆ ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಗರದ ಬಿ.ಡಿ.ರೋಡ್, ಭಾಗ್ಯ ಕಾಂಪ್ಲೆಕ್ಸ್‌ನಲ್ಲಿನ ಕೈಮಗ್ಗದ ಮಾತು ಜವಳಿ ಇಲಾಖೆ ಉಪನಿರ್ದೇಶಕ ಕಚೇರಿ ದೂರವಾಣಿ ಸಂಖ್ಯೆ 08194-221426 ಗೆ ಸಂರ್ಕಿಸಲು ಪ್ರಕಟಣೆಯನ್ನು ಕೋರಲಾಗಿದೆ.