ಶಿವಮೊಗ್ಗ : ರಾಜ್ಯದಲ್ಲಿ ಎಗ್ಗಿಲ್ಲದೇ ಎಲ್ಲೆಂದರಲ್ಲಿ ಮಾರಾಟವಾಗುತ್ತಿರುವ ಬೀಡಿ, ಸಿಗರೇಟು, ಗುಟಕಾ ಹಾಗೂ ತುಂಬಾಕು ಉತ್ಪನ್ನಗಳ ಮಾರಾಟ ಮತ್ತು ಸಾಗಾಟ ನಿಯಂತ್ರಿಸುವ ಆಧುನಿಕ ಇಂದು ಸದನದಲ್ಲಿ ಆಡಳಿತ ಪಕ್ಷವು ಮಂಡಿಸಿದ ವಿಧೇಯಕ ವಿಪಕ್ಷಗಳ ಸದಸ್ಯರ ಅನುಮೋದನೆಗೆ ಅಂಗೀಕಾರವಾಯಿತು.
ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವೀಪೂರ್ವ ಶಿಕ್ಷಣ ಇಲಾಖೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ನವೀಕೃತ ಮತ್ತು ಜಿಲ್ಲಾ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಪ್ರಸಕ್ತ ಸಾಲಿನ ಶಾಲಾ ವಿದ್ಯಾರ್ಥಿಗಳ ರಾಜ್ಯ ಯುವ ಅಣುಕು ಸಂಸತ್ ಆಡಳಿತ ಮತ್ತು ವಿರೋಧ ಪಕ್ಷಗಳ ಪರಸ್ಪರ ಆರೋಪ, ಪ್ರತ್ಯಾರೋಪ, ಕೆಸರೆಚುವಿಕೆ, ಟೀಕೆ ಮತ್ತು ಗದ್ದಲಗಳ ನಡುವೆ ಸಂಪನ್ನಗೊಆಡಿತು.
ಅಧಿವೇಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಅಪ್ಪಟ ರಾಜಕಾರಣಿಗಳಂತೆ ವರ್ತಿಸಿ, ನೆರೆದಿದ್ದವರಲ್ಲಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿದರು. ಅಣುಕು ಯುವಸಂಸತ್ ಸ್ಪರ್ಧೆ ರಾಜ್ಯಸಭೆಯಲ್ಲಿ ನಡೆಯುವ ಅಧಿವೇಶನದ ಚಿತ್ರಣವನ್ನು ಯಥಾವತ್ತಾಗಿ ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು.
ಹಂಗಾಮಿ ಸಭಾಪತಿಗಳು ನೂತನವಾಗಿ ಆಯ್ಕೆಗೊಂಡ ಸದಸ್ಯರಿಗೆ ಪ್ರಮಾಣವಚನ ಬೋದಿಸುವುದರೊಂದಿಗೆ ಅಧಿವೇಶನ ಆರಂಭವಾಯಿತು. ಸದನದ ನಿಯಮಾನುಸಾರ ಸಭಾಧ್ಯಕ್ಷರ ಆಗಮನ, ಸಂತಾಪ ಸೂಚನೆಯ ನಂತರ ಕಲಾಪ ಆರಂಭವಾಯಿತು.
ಆರಂಭದಲ್ಲಿ ಗ್ರಾಮೀಣ ಪ್ರದೇಶದ ಬಹುಸಂಖ್ಯೆಯ ಸುಲಭ ಹಾಗೂ ಸರಳವಾಗಿ ಶಿಕ್ಷಣ ದೊರಕಿದಂತಾಗುತ್ತದೆ, ಅಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಪಡೆಯುವುದರಿಂದ ವಿಮುಖರಾಗುತ್ತಿದ್ದಾರೆ. ಈ ಸರ್ಕಾರದ ನಿರ್ಣಯಗಳು ತೃಪ್ತಿಕರವಾಗಿಲ್ಲ. ಕೂಡಲೇ ಸರ್ಕಾರದ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷಗಳ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಅನೇಕ ಮುಖ್ಯಮಂತ್ರಿಗಳು, ಕನ್ನಡ ಮಕ್ಕಳ ಶಿಕ್ಷಣ ಸರ್ಕಾರ ಬದ್ದವಾಗಿದೆ, ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಗ್ರಾಮೀಣ ಮಕ್ಕಳ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವಲ್ಲಿ ಕ್ರಮಕೈಗೊಂಡಿದೆ. ಇದರೊಂದಿಗೆ ಅನೇಕ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ಅಲ್ಲಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ನಿರಂತರವಾಗಿವೆ. ಮಹಿಳೆಯರ ರಕ್ಷಣೆ ಇಲ್ಲ ಎಂಬ ಪ್ರತಿಪಕ್ಷಗಳ ಸದಸ್ಯರ ಆರೋಪಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅವರು ಉತ್ತರಿಸಿದರು, ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹಿಂದೆ ಅಡಿಗಿಎತ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಅತ್ಯಾಚಾರ, ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕೆ ಕಠಿಣ ಕಾನೂನನ್ನು ಜಾರಿಗೊಳಿಸಲಾಗಿದೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ. ಈ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವರ್ಗಾವಣೆ ದಂಧೆಯಾಗಿದೆ. ಲಂಚಬಾಕ ಹಾವಳಿ. ಜನರ ಸರ್ಕಾರದ ಆಡಳಿತ ವ್ಯವಸ್ಥೆಯಿಂದಾಗಿ ರೋಸಿ ಹೋಗಿದ್ದಾರೆ ಎಂಬ ವಿಪಕ್ಷಗಳ ಮಾತಿಗೆ ಕೆಂಡಾಮಅಡಲರಾದ ಮುಖ್ಯಮಂತ್ರಿಗಳು ನಿಖರವಾದ ಮಾಹಿತಿಯೊಂದಿಗೆ ಅಂತಹ ಪ್ರಕರಣಗಳ ವಿರುದ್ಧ ಸರ್ಕಾರ ಕ್ರಮವಹಿಸಲಿದೆ. ಬದಲಾಗಿ ಮಿಥ್ಯಾರೋಪ ಮಾಡುವುದು ವಿಪಕ್ಷಗಳಿಗೆ ಶೋಭೆ ತರುವುದಿಲ್ಲ.
ಸಭೆಯಲ್ಲಿ ಉಪಸ್ಥಿತರಿದ್ದ ಕ್ರೀಡಾಸಚಿವಪಕ್ಷದ ಸದಸ್ಯರ ಪ್ರಶ್ನೆಗೆ ಉತ್ತರಿಸಿ, ಯುವಸಬಲೀಕರಣ ಮತ್ತು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಸಾವಿರಾರು ಕೋಟಿ ರೂಪಾಯಿಗಳನ್ನು ಕಾಯ್ದಿರಿಸಿದ್ದು, ಆದ್ಯತೆಯ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈಗಾಗಲೆ ಕ್ರೀಡಾ ಕ್ಷೇತ್ರದ ಉನ್ನತಿಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಫುಲ ಅವಕಾಶಗಳು, ಅನುದಾನ ಲಭ್ಯತೆಯ ಆಧಾರದ ಮೇಲೆ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಕನ್ನಡ ಶಾಲೆ ಮಕ್ಕಳ ದಾಖಲಾತಿ ಸಂಖ್ಯೆ ಕುಂಠಿತವಾಗಿದ್ದು, ದಾಖಲಾತಿ ಸಂಖ್ಯೆಗೆ ಕ್ರಮ ವಹಿಸಲಾಗಿದೆ ಎಂದು ಸಂಬಂಸಿದ ಇಲಾಖೆಗಳ ಸಚಿವರು ಸದನದಲ್ಲಿ ಪ್ರತಿಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಗೋಚರಿಸುವ ಡೇಂಗ್ಯೂ ಸೋಂಕಿತರ ಸಂಖ್ಯೆ ಕಳೆದ ಸಾಲಿಗೆ ಹೋಲಿಸಿಕೊಂಡಾಗ ಸೋಂಕಿತರ ಸರ್ಕಾರವು ಸಕಾಲದಲ್ಲಿ ಕೈಗೊಂಡ ನಿಯಂತ್ರಣ ಕ್ರಮಗಳಿಂದ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಕಳೆದ ಸಾಲಿನಲ್ಲಿ 7ಲಕ್ಷಕ್ಕೂ ಹೆಚ್ಚಿದ್ದ ಸೋಂಕಿತರ ಸಂಖ್ಯೆ ಪ್ರಸ್ತುತ 723ಪ್ರಕರಣಗಳು ಮಾತ್ರ ಗುರುತಿಸಲ್ಪಟ್ಟಿರುವುದು ವಿಶೇಷವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಸದನದಲ್ಲಿ ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ದಾಖಲಾಗುತ್ತಿರುವ ಸೈಬರ್ ಕ್ರೆÊಂ ಪ್ರಕರಣಗಳ ಸಂಖ್ಯೆ ಆಶ್ಚರ್ಯಕರ ರೀತಿಯಲ್ಲಿ ಏರುಗತಿಯಲ್ಲಿದೆ. ಇದರ ನಿಯಂತ್ರಣಕ್ಕೆ ಸರ್ಕಾರ ಸಕಾಲಿಕ ಹಾಗೂ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಪ್ರತಿಪಕ್ಷದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
ನಂತರ ಸಭಾಧ್ಯಕ್ಷರು ಸದನವನ್ನು ಅಲ್ಪಕಾಲ ಮುಂದೂಡಿದರು. ಉಪಸಭಾಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಪುನರಾರಂಭಗೊಆಡ ಸದನದ ಶೂನ್ಯವೇಳೆಯ ಚರ್ಚೆಯಲ್ಲಿ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಕ್ಕೆ ಆರೋಗ್ಯ ಸಚಿವರು ಉತ್ತರಿಸಿ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ, ಬಹು ನಿರೀಕ್ಷಣಾ ಆಸ್ಪತ್ರೆಗಳನ್ನು ಸ್ಥಾಪಿಸಿ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಸರ್ಕಾರ 100ಕೋಟಿ ರೂ.ಗಳ ಅನುದಾನವನ್ನು ಕಾಯ್ದಿರಿಸಿದ್ದು, ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನ ಹಲವು ಖಾಸಗಿ ಶಾಲೆ ಹಾಗೂ ಹೋಟೆಲ್‌ಗಳಿಗೆ ಬಂದಿರುವ ಇ-ಮೇಲ್ ಸಂದೇಶಗಳು ಅದಾಗಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರವು ಈ ಬಗ್ಗೆ ತುರ್ತು ಕ್ರಮ ವಹಿಸಬೇಕು. ರಾಜ್ಯದ ಕಬ್ಬು ಬೆಳೆಗಾರರ ರಕ್ಷಣೆಗೆ ಸರ್ಕಾರ ಕ್ರಮ ವಹಿಸಬೇಕು ಎಂಬ ಚರ್ಚೆಗಳು ನಡೆದವು.
ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸಾಗಾಟ ನಿಯಂತ್ರಿಸುವ ಇಂದು ಸದನದಲ್ಲಿ ಸರ್ಕಾರವು ಮಂಡಿಸಿದ ವಿಧೇಯಕ ವಿಪಕ್ಷಗಳ ಸದಸ್ಯರ ಅನುಮೋದನೆಯೊಂದಿಗೆ ಅಂಗೀಕಾರವಾಯಿತು. ನಂತರ ಸದನವನ್ನು ಮುಂದೂಡಲಾಯಿತು.
ಈ ಅಣುಕು ಸಂಸತ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಮಕ್ಕಳು, ಶಿಕ್ಷಕರು ಹಾಗೂ ಪೋಷಕರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಉಪನ್ಯಾಸಕ ಗಣಪತಿ, ಸತ್ಯನಾರಾಯಣ್, ಡಯಟ್ ಪ್ರಾಚಾರ್ಯ ಶ್ರೀಮತಿ ಬಿಂಬಾ, ಹಿರಿಯ ಉಪನ್ಯಾಸಕ ಡಾ|| ಹರಿಪ್ರಸಾದ್, ಸಂಸದೀಯ ವ್ಯವಹಾರಗಳ ಸಚಿವಾಲಯದ ಸಂತೋಷ್ ಪೂರಕರು.
ಈ ಅನುಕು ಸಂಸತ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಶಿಸ್ತು, ಸಭ್ಯತೆ, ಸಂಸದೀಯ ಕಾರ್ಯವಿಧಾನಗಳ ಪಾಲನೆ, ವಿಷಯ ಮಂಡನೆ, ಅದರ ಗುಣಮಟ್ಟ, ವಿಷಯ ಆಯ್ಕೆ, ಭಾಷಣ ಶೈಲಿ, ಮೌಲಿಕ ಚರ್ಚೆ ಮತ್ತು ಗುಣಮಟ್ಟ, ಶ್ಲಾಘನೆ ಮತ್ತು ಸಾಧನೆ ಮುಂತಾದ ವಿಷಯಗಳ ಆಧಾರದ ಮೇಲೆ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ -ಸತ್ಯನಾರಾಯಣ್ , ತೀರ್ಪುಗಾರರು.