ಚಿತ್ರದುರ್ಗ : ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆಗೊಬ್ಬರ, ಬೆಳೆ ಮತ್ತು ಅಕ್ಕಡಿ/ಅಂತರ ಬೆಳೆ ಬೆಳೆಯುವುದು ಅವಶ್ಯಕ ಎಂದು ಹೊಳಲ್ಕೆರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್ ತಿಳಿಸಿದರು.
ಬಬ್ಬೂರುಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಹೊಳಲ್ಕೆರೆ ತಾಲೂಕಿನ ಬಿ.ದುರ್ಗ ಹೋಬಳಿಯ ಬಂಡೆಬೊಮ್ಮೇನಹಳ್ಳಿ ಗ್ರಾಮದಲ್ಲಿ ಗುರುವಾರ ರೈತರಿಗೆ ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಕುರಿತು ತರಬೇತಿ ಹಾಗೂ ಚಿಕ್ಕಜಾಜೂರು ರೈತ ಸಂಪರ್ಕ ಕೇಂದ್ರದ ವತಿಯಿಂದ ರಾಗಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಸ್ಥಿರ ಕೃಷಿ ಮತ್ತು ಗುಣಮಟ್ಟದ ಆಹಾರದ ಉತ್ಪಾದನೆಗೆ ರೈತರು ಕೃಷಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ನಡೆಯುವ ತಾಂತ್ರಿಕ ತರಬೇತಿಗಳ ಪ್ರಯೋಜನ ಪಡೆಯಬೇಕು ಎಂದು ರೈತರಿಗೆ ಮನವಿ ಮಾಡಿದರು.
ಜಿಲ್ಲಾ ಕೃಷಿ ತರಬೇತಿಕೇಂದ್ರ ಬಬ್ಬೂರು ಫಾರಂನ ಸಹಾಯಕ ಕೃಷಿ ನಿರ್ದೇಶಕ ಹಾಗೂ ಮುಖ್ಯಸ್ಥ ಆರ್.ರಜನೀಕಾಂತ ಮಾತನಾಡಿ, ಜಿಲ್ಲಾಕೃಷಿ ತರಬೇತಿ ಕೇಂದ್ರದ ರೈತರಿಗೆ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳ ಕುರಿತು ಆಯೋಜಿಸುತ್ತಿರುವ ಸಾಂಸ್ಥಿಕ ತರಬೇತಿ, ಹೊರಾಂಗಣ ತರಬೇತಿ, ಆನ್‌ಲೈನ್ ತರಬೇತಿಗಳ ಸದುಪಯೋಗ ಪಡೆದುಕೊಳ್ಳುವುದು.
ಕೃಷಿಯಲ್ಲಿ ಬೆಳೆಯುವ ಬೀಜಗಳ ಬೀಜದ ಮಹತ್ವ ಹಾಗೂ ಬೆಳವಣಿಗೆಯ ಹಂತದಲ್ಲಿ ಬರುವ ಕೀಟ ಮತ್ತು ರೋಗಗಳ ನಿರ್ವಹಣೆಗೆ ವೈದ್ಯೋಪಚಾರದ ಅತ್ಯವಶ್ಯಕ ಎಂದು ತಿಳಿಸಿದರು. ಅವರು, ಕಡಲೆ, ಹುರುಳಿ, ಅಲಸಂದೆ ಬೆಳೆಗಳಲ್ಲಿ ಸೊರಗುರೋಗ ನಿರ್ವಹಣೆಗೆ ಕಾರ್ಬನ್ಡೈಜಿಮ್ @ 2 ಗ್ರಾಂ/ಕೆಜಿ ಬೀಜಕ್ಕೆಟ್ರೈಕೋಡರ್ಮಾ ಬಳಸಿ @ 4-10 ಗ್ರಾಂ/ಏಕಪ್ರತಿಕೆಜಿಗೆ ಬೀಜೋಪಚಾರ.ಹಾಗೆ ಸೂಕ್ಷ್ಮಜೀವಿ. ರಾಗಿ, ಗೋಧಿ, ಮುಸುಕಿನ ಜೋಳ ಬೆಳೆಗಳಲ್ಲಿ ಇಳುವರಿಯನ್ನು ಹೆಚ್ಚಿಸಲು ಸಾರಜನಕಸ್ಥಿರಿಸುವ ಜೀವಾಣುಗಳಾದ ಅಜೋಸ್ಪರಿಲಂ, ಅಜೋಟೊಬ್ಯಾಕ್ಟರ್‌ಗಳು ಹಾಗೂ ಬೆಳೆಕಾಳು ಬೆಳೆಗಳಾದ ಹುರಳಿ, ಅಲಸಂದೆ, ಕಡಲೆ ಮುಂತಾದ ಬೆಳೆಗಳಲ್ಲಿ ರೈಜೋಬಿಯಂಅಣುಜೀವಿ ಗೊಬ್ಬರವನ್ನು ಬೀಜೋಪಚಾರಕ್ಕೆ ಬಳಸಬಹುದು. ರಂಜಕ ಕರಗಿಸುವ ಜೀವಾಣುಗಳನ್ನು (ಪಿ.ಎಸ್.ಬಿ) ಎಲ್ಲಾ ಬೆಳೆಗಳಿಗೂ ಬಳಸಬಹುದಾಗಿದೆ.
ಯಾವುದೇ ಕೀಟನಾಶಕ ಬಳಸುವುದಕ್ಕೆ ಮುಂಚೆ ಜೊತೆಯಲ್ಲಿ ಕೊಟ್ಟಿರುವ ಚೀಟಿ (ಲೇಬಲ್) ಓದಬೇಕು. ಸಿಂಪರಣಾ ದ್ರಾವಣಗಳಿಂದ ರಕ್ಷಿಸಿಕೊಳ್ಳಲು ಯಾವಾಗಲೂ ಸರಿಯಾದ ಬಟ್ಟೆಗಳನ್ನು ಧರಿಸಬೇಕು. (ಕನ್ನಡಕ, ಮುಖವಾಡ, ಕೈ ಮುಂತಾದವುಗಳು). ಸೋರುವ ಅಥವಾ ಹಾನಿಯಾಗಬಾರದು ಸಿಂಪರಣ ಯಂತ್ರ (ಸೈಯರ್) ಅನ್ನು ಉಪಯೋಗಿಸಿ. ಗಾಳಿ ಬೀಸುತ್ತಿರುವ ದಿಕ್ಕಿನಿಂದಲೇ ಕೀಟನಾಶಕ ದ್ರಾವಣವನ್ನು ಸಿಂಪಡಿಸಬೇಕು ಮತ್ತು ಗಾಳಿಗೆ ವಿರುದ್ಧವಾದ ದಿಕ್ಕಿನಲ್ಲಿಸಿಂಪಡಿಸಬಾರದು. ಕೀಟನಾಶಕ ಸಿರಿನೊಡನೆ ಒಳಗೆ ಹೋಗುವುದನ್ನುತಡೆಯಲುಯಾವಾಗಲೂ ಸೊಂಟದಿಂದ ಕೆಳಮಟ್ಟದಲ್ಲಿ ಸಿಂಪಡಿಸಬೇಕು.
ಸಿಂಪರಣೆಯ ನಂತರ ಸಾಬೂನಿನಿಂದ ಸ್ನಾನ ಮಾಡಿ ಬಟ್ಟೆಯನ್ನು ಬದಲಾಯಿಸಬೇಕು. ನಂತರ ಆಹಾರ ಮತ್ತು ನೀರನ್ನು ಸೇವಿಸಬೇಕು. ಹಾಗೂ ಸಿಂಪಣಾ ಸಮಯದಲ್ಲಿ ಉಪಯೋಗಿಸಿದ ಬಟ್ಟೆಯನ್ನು ಉಪಯೋಗಿಸಬೇಕು. ಸಿಂಪರಣೆಯ ಸಮಯದಲ್ಲಿ ಎಲೆ-ಅಡಿಕೆಜಗಿಯಬಾರದು ಮತ್ತು ಧೂಮಪಾನ ಮಾಡಬಾರದು ಮತ್ತು ತೊಂದರೆ ಉಂಟಾದಾಗ ಸಿಂಪರಣೆ ಮಾಡುವುದನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯಬೇಕು. ಕೀಟನಾಶಕಗಳನ್ನು ಮಕ್ಕಳ ಕೈಗೆ ಸಿಗದಂತೆ ಪ್ರತ್ಯೇಕ ಸ್ಥಳದಲ್ಲಿಟ್ಟು ಬೀಗ ಹಾಕಬೇಕು. ಖಾಲಿಯಾದ ಕೀಟನಾಶಕದ ಡಬ್ಬಗಳನ್ನು ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಉಪಯೋಗಿಸಬಾರದು. ಖಾಲಿಯಾದಡಬ್ಬವನ್ನು ನಾಶಪಡಿಸಿ ಮತ್ತು ನೆಲದೊಳಗೆ ಅದನ್ನು ಹೂತು ಹಾಕಬೇಕು ಎಂದು ಸ್ಥಾಪಿಸಿದರು.
ಆರೋಗ್ಯಕರ ಸ್ವಾವಲಂಬನೆ ಜೀವನ ನಡೆಸಲು ರೈತರು ಕೃಷಿಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಲು ಅನವಶ್ಯಕವಾಗಿ ರಸಾಯನಿಕಗೊಬ್ಬರ ಬಳಕೆ ಮಾಡದೆ ಸ್ಥಳೀಯವಾಗಿ ದೊರೆಯುವ ಕೃಷಿ ತ್ಯಾಜ್ಯಗಳಿಂದ ಕಾಂಪೋಷ್ಟ್ ಅಥವಾ ಎರೆಹುಳು ಗೊಬ್ಬರ ತಯಾರಿಸಿ ಬಳಸಬೇಕೆಂದರು.
ಆರೋಗ್ಯಕರಜೀವನ ನಡೆಸಲು ರೈತರು ಅಥವಾ ಕುಟುಂಬಕ್ಕೆ ಬೇಕಾದ ಹಣ್ಣು, ಸೊಪ್ಪು ಮತ್ತು ತರಕಾರಿಗಳನ್ನು ತಮ್ಮ ಜಮೀನು ಮನೆಯ ಹಿತ್ತಲಿನಲ್ಲಿ ಕನಿಷ್ಠ 1 ಅಥವಾ 2 ಗುಂಟೆ ಪ್ರದೇಶದಲ್ಲಿ ಪೌಷ್ಠಿಕ ಕೈತೋಟ ಮಾಡಿಕೊಳ್ಳುವುದು ಉತ್ತಮವಾಗಿದೆ. ಜೊತೆಗೆ ರೈತರು ಗಾಣದಎಣ್ಣೆ ಬಳಕೆ ಮತ್ತು ಸಿರಿಧಾನ್ಯಗಳನ್ನು ಬೆಳೆಯುವುದರ ಜೊತೆಗೆ ದಿನನಿತ್ಯದ ಆಹಾರ ಸೇವನೆಯು ಅವರಿಗೆ ಸೂಕ್ತವಾಗಿದೆ.
ತರಬೇತಿಯ ನಂತರ ಆಹಾರ ಮತ್ತು ಪೌಷ್ಟಿಕ ಯೋಜನೆಯಡಿಯಲ್ಲಿ ಪರಮೇಶ್ವರಪ್ಪರವರ ರಾಗಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತಬಾಂಧವರು ಭಾಗವಹಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ರೈತ ಸಂಪರ್ಕಕೇಂದ್ರ, ಚಿಕ್ಕಜಾಜೂರಿನ ಕೃಷಿ ಅಧಿಕಾರಿ ಮಂಜುನಾಥ ಮೆಗಳಮನೆ, ಆಹಾರ ಮತ್ತು ಪೌಷ್ಟಿಕ ತಾಂತ್ರಿಕ ತಾಂತ್ರಿಕ ಸಹಾಯಕ ಗೋಪಿ ಕೃಷ್ಣ ಎಚ್.ಕೆ., ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಸುರೇಶ್ ಎಂ.ಎಸ್., ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರೂಪ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ, ರಾಜಪ್ಪ, ಪರಮೇಶ್ವರಪ್ಪ ಹಾಗೂ ರೈತರು ಇದ್ದರು.